ಮುಖಪುಟ /ಪ್ರವಾಸಿತಾಣ  

ಹಳೆಯ ನೆನಪು ಕೆದಕುವ ರಮ್ಯ ಲೋಕ
ರಾಮನಗರ ಬಳಿಯ ಜಾನಪದಲೋಕ

*ಟಿ.ಎಂ. ಸತೀಶ್

Janapadaloka, kannadaratna.comಇದು ಮಿಕ್ಸರ್, ಗ್ರೈಂಡರ್ ಕಾಲ;;, ಇಂದಿನ ಪಟ್ಟಣವಾಸಿ ಯುವಕರಿಗೆ, ಕಿರಿಯರಿಗೆ ಬೀಸುವಕಲ್ಲು ಎಂಬುದೊಂದಿತ್ತು. ಅದರಲ್ಲಿ ಅಕ್ಕಿ, ರಾಗಿ ಬೀಸಿ ಹಿಟ್ಟು ಮಾಡುತ್ತಿದ್ದರು ಎಂಬುದೇ ಗೊತ್ತಿಲ್ಲ. ಅಂಥಹುದರಲ್ಲಿ ಎತ್ತುಗಳನ್ನು ಹೂಡಿ ರಾಗಿ ಬೀಸುತ್ತಿದ್ದ ಬೃಹತ್ ರಾಗಿಕಲ್ಲುಗಳಿದ್ದವು ಎಂದರೆ ಅವರು ನಂಬುತ್ತಾರೆಯೇ?

ಧಾನ್ಯಗಳನ್ನು ತುಂಬಿಡಲು ಬಿದುರು,ಬೆತ್ತದ ಗೂಡೆಗಳಿದ್ದವು, ಮಕ್ಕಳನ್ನು ತೂಗಲು ೪೦-೫೦ ಕೆ.ಜಿ. ತೂಕದ ಮರದ ತೊಟ್ಟಿಲುಗಳಿದ್ದವು, ಒಡವೆ ವಸ್ತು ಜತನವಾಗಿಡಲು ಗಜಗಾತ್ರದ ಮರದ ಪೆಟ್ಟಿಗೆಗಳಿದ್ದವು, ಇಡ್ಲಿ, ಗುಳ್ಳುಪಂಕ್ಟೆ ಮಾಡಲು ಬಳಪದ ಕಲ್ಲಿನ ಹೆಂಚುಗಳಿದ್ದವು, ಧಾನ್ಯ, ಹಾಲು ಅಳೆಯಲು ಪಾವು, ಚಟಾಕು, ಬಳ್ಳ ಎಂಬ ಸಾಧನಗಳಿದ್ದವು, Bisokallu, Janapadaloka, kannadaratna.com ಇಂದಿನ ಜನಾಂಗದವರಿಗೆ ನಮ್ಮ ನಮ್ಮ ಹಿರೀಕರು, >, ಗ್ರಾಮೀಣರು, ಜನಪದರು ಬಳಸುತ್ತಿದ್ದ ಇಂಥ ನೂರಾರು ಕಲಾಕೃತಿಗಳನ್ನು, ಭಗ್ನಗೊಂಡ ವಿಗ್ರಹ, ವೀರಗಲ್ಲು, ಸಾಕ್ಷಿಗಲ್ಲುಗಳು, ರಾಜ ಮಹಾರಾಜರು, ಪಾಳೆಯಗಾರರು ಬಳಸುತ್ತಿದ್ದ ಖಡ್ಗ, ಗುರಾಣಿ, ಮನೆಗಳಲ್ಲಿ ಬಳಸುತ್ತಿದ್ದ ನೂರಾರು ವಿಧದ ಅಡುಗೆ ಸಲಕರಣೆಗಳು, ಅರ್ಧಬೆಂದ ರಥ, ಸುಟ್ಟುಗ, ಚಿಕ್ಕ ಬಾಯಿಯ ದೊಡ್ಡ ಕಲ್ಲಿನ ಹೂಜಿ, ಜನಪದ ವಾದ್ಯಗಳಾದ ಕೊಂಬು, ಕಹಳೆ, ತಮಟೆ, ನಗಾರಿ, ಜನಪದ ಕಲೆಯ ತೊಗಲುಗೊಂಬೆ, ಮದ್ರಾಸ್‌ನಲ್ಲಿರುವ ಸ್ಯಾಪರ್ಸ್ ಮ್ಯೂಸಿಯಂನಂತೆಯೇ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಇರುವ ವಿಶಿಷ್ಟ ವಸ್ತುಗಳ ಸಂಗ್ರಹಾಲಯವೇ ಈ ಜನಪದ ಲೋಕ. ಜನಪದ ಲೋಕ ದಿವಂಗತ ಡಾ.ಎಚ್.ಎಲ್. ನಾಗೇಗೌಡರ ಕನಸಿನ ಕೈಗೂಸು. ಕನ್ನಡ ನಾಡಿನ ಜನಪದ ಸಂಸ್ಕೃತಿ ಆಧುನಿಕ ಯುಗದ, ಪಾಶ್ಚಾತ್ಯ ಸಂಸ್ಕೃತಿಯ, ನಗರೀಕರಣ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಜೀವಂತವಾಗಿರಬೇಕು ಎಂದು ನಾಗೇಗೌಡರು ಏಕಾಂಗಿಯಾಗಿ ಹೋರಾಡಿ ಕಟ್ಟಿದ ವಿಸ್ಮಯಕಾರಿ ಈ ಲೋಕ ನಮ್ಮ ಹಳೆಯ ನೆನಪುಗಳನ್ನು Janapadaloka, kannadaratna.comಮೆಲಕುಹಾಕುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಐ.ಎ.ಎಸ್. ಅಕಾರಿಯಾಗಿದ್ದ ನಾಗೇಗೌಡರು ತಮ್ಮ ಬಿಡುವಿಲ್ಲದ ಕಾರ್ಯಭಾರದ ನಡುವೆಯೂ ಬಿಡುವು ಮಾಡಿಕೊಂಡು, ತಾವು ಹೋದ ಊರಿನಲ್ಲೆಲ್ಲಾ ಅನಾಥವಾಗಿ ಮನೆಗಳ ಮೂಲೆ, ಅಟ್ಟ ಸೇರಿದ್ದ ಹಲವಾರು ಬಗೆಯ ಜನಪದ ವಸ್ತುಗಳನ್ನು ಸಂಗ್ರಹಿಸಿ, ಕಾಪಾಡಿ ಮುಂದಿನ ಪೀಳಿಗೆಗೆ ಒಂದು ಮಹಾನ್ ಆಸ್ತಿಯನ್ನೇ ಕಟ್ಟಿಕೊಟ್ಟಿದ್ದಾರೆ.

೧೯೬೨ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಾಗೇಗೌಡರು ಇಂಥ ಒಂದು ಸಂಗ್ರಹಾಲಯ ಸ್ಥಾಪಿಸಿದರು. ೭೯ರಲ್ಲಿ ನಿವೃತ್ತರಾದ ಬಳಿಕ ಕರ್ನಾಟಕ ಜಾನಪದ ಟ್ರಸ್ಟ್ ಕಟ್ಟಿದರು. ಅಭಿಮಾನಿಗಳು ಕೊಟ್ಟ ೧ ಲಕ್ಷ ರೂಪಾಯಿಗಳನ್ನು ಟ್ರಸ್ಟ್‌ನಲ್ಲಿ ತೊಡಗಿಸಿದರು. ಗ್ರಾಮ46;, ಗುಡ್ಡಗಾಡು ಅಲೆದು ವಿವಿಧ ರೀತಿಯ ಜನಪದ ವಸ್ತುಗಳನ್ನು ,ವಾದ್ಯಗಳನ್ನು, ಆಧುನೀಕರಣದ ನೆಪದಲ್ಲಿ ಮೂಲೆ ಸೇರಿದ್ದ ಅಂಕಣದ ಮನೆಗಳ ತೊಲೆ, ಸಾಲುಕಂಬಗಳನ್ನು ಸಂಗ್ರಹಿಸಿದರು. ೮೪ರಲ್ಲಿ ಬೆಂಗಳೂರಿನ ತಮ್ಮ ಮನೆಯಲ್ಲೇ ಒಂದು ವಸ್ತುಸಂಗ್ರಹಾಲಯ ಸ್ಥಾಪಿಸಿದರು. ಇಷ್ಟಾದರೂ ೨೫ ಎಕರೆ ಭೂಮಿಯಲ್ಲಿ ವಿಶಾಲವಾದ ಜನಪದಲೋಕ ತೆರೆಯುವ ಕನಸಿಗೆ ಇಂಬು ನೀಡಿದರು. ಟ್ರಸ್ಟ್‌ನಿಂದ ರಾಮನಗರ ಬಳಿ ೧೧ ಎಕರೆ ಭೂಮಿ ಖರೀದಿಸಿದರು. ಸರ್ಕಾರ ನಾಲ್ಕು ಎಕರೆ ಭೂಮಿ ನೀಡಿತು. ಈ ೧೫ ಎಕರೆಯಲ್ಲಿ ಒಂದು ವಿಸ್ಮಯ ಲೋಕವನ್ನೇ ಕಟ್ಟಿದರು. ಆಳೆತ್ತರ ಬೆಳೆದ ವೃಕ್ಷಿಸಿರಿಯ ಮಡಿಲಲ್ಲಿ ಗುರುಕುಲ ಮಾದರಿಯ ಕುಟೀರಗಳನ್ನು ನಿರ್ಮಿಸಿ ಅದರಲ್ಲಿ ತಾವು ಸಂಗ್ರಹಿಸಿದ ಜನಪದ ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟರು. ಯಾವ ವಸ್ತು ಯಾವುದು ಎಂಬ ಬರಹ ತೂಗು ಹಾಕಿದರು. ೧೯೯೪ರ ಮಾರ್ಚ್ ೨೦ರಂದು ಈ ಲೋಕ ಸಾರ್ವಜನಿಕರಿಗೆ ಸಮರ್ಪಣೆಯಾಯಿತು. ಜನಪದ ಮಂಟಪದ ನಿರ್ಮಾಣವೂ ಆಯಿತು.

, ಅದರ ಪಕ್ಕದಲ್ಲಿ ಜೋಡಿ ಕೊಳ (ಜನಪದ ವಾದ್ಯ)ಗಳಿವೆ. ಗೇಟಿಗೆ ಆಧಾರವಾದ ಕಂಬಗಳ ಮೇಲೆ janapadaloka, kannadaratna.comನಂದಿಧ್ವಜವಿದೆ. ಒಳ ಹೋಗುತ್ತಿದ್ದಂತೆ ಬಿಳಿ ಬಾತುಕೋಳಿಗಳ ಗುಂಪು ಆತ್ಮೀಯವಾಗಿ ಸ್ವಾಗತಿಸುತ್ತದೆ. ಪುರಾತನ ಹೆಂಚಿನ ಮನೆಯ ಒಳಹೊಕ್ಕರೆ ಹೊಸ ಕಿನ್ನರ ಲೋಕವೇ ತೆರೆದುಕೊಳ್ಳುತ್ತದೆ. ಜನಪದ ಲೋಕದಲ್ಲಿ ಒಟ್ಟು ೧೨ ಘಟಕಗಳಿವೆ. ಮಾಸ್ತಿಗಲ್ಲು, ವೀರಗಲ್ಲುಗಳ ಶಿಲ್ಪಮಾಳ, ಮನೆಬಳಕೆ ವಸ್ತುಗಳ ಲೋಕಮಾತಾ ಮಂದಿರ, ಜಾನಪದ ಕ್ಯಾಸೆಟ್, ಸ್ಲೈಡ್‌ಗಳಿಂದ ಕೂಡಿದ ಚಿತ್ರಕುಟೀರ, ಬಯಲು ರಂಗಮಂದಿರ, ಅಪರೂಪದ ವಸ್ತುಗಳಿಂದ ಕೂಡಿದ ಲೋಕಮಹಲ್ ಕಣ್ಮನ ಸೆಳೆಯುತ್ತವೆ. ಜನಪದ ಅಧ್ಯಯನಿಗಳಿಗೆ ಆಕರವಾಗಿರುವ ಈ ಲೋಕವನ್ನು ಸುಮ್ಮನೆ ನೋಡಿ ಬರಲು ಒಂದೆರೆಡು ಗಂಟೆ ಸಾಕು. ಆದರೆ ವಿವರವಾಗಿ ತಿಳಿಯಲು ಕನಿಷ್ಠ ಮೂರ್‍ನಾಲ್ಕು ದಿನಗಳಾದರೂ ಸಾಲದು. ಇನ್ನೂ ಹೆಚ್ಚಿನ ವೇಳೆ ಇದ್ದರೆ ಸಾವಿರಾರು ಗಂಟೆಗಳ ದೃಕ್, ಶ್ರವಣ ಮುದ್ರಿಕೆಗಳನ್ನೂ ಕೇಳಬಹುದು.

ಇಷ್ಟೆಲ್ಲಾ ನೋಡಿ ಬಂದ ಮೇಲೆ ೧೫ ಎಕರೆ ಪ್ರದೇಶದಲ್ಲಿ ಸುತ್ತು ಹಾಕಿ ಬಂದ ಮೇಲೆ ಹಸಿವಾಗದಿರುವುದೇ. ಹೊಟ್ಟೆ ತುಂಬಿಸಲೆಂದೇ ಇಲ್ಲಿ ರುಚಿಯಾದ ಊಟ ಸಿಗುವ ಲೋಕರುಚಿ ರೆಸ್ಟೊರೆಂಟ್ ಕೂಡ ಇದೆ. ;.

ಬೆಂಗಳೂರಿನಿಂದ ಜಾನಪದ ಲೋಕಕ್ಕೆ ೫೨ ಕಿ.ಮೀ. ಮೈಸೂರಿಗೆ ಹೋಗುವಾಗ ಇಲ್ಲವೇ ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಒಂದೆರೆಡು ಗಂಟೆ ಬಿಡುವು ಮಾಡಿಕೊಂಡು ಈ ತಾಣಕ್ಕೆ ಬೇಟಿ ಕೊಟ್ಟರೆ, ನೀವು ಬಾಲ್ಯದಲ್ಲಿ ಕಂಡ ವಸ್ತುಗಳು ನಿಮ್ಮನ್ನು ನಿಮ್ಮ ನೆನಪುಗಳನ್ನು ಕೆದಕುವಂತೆ ಮಾಡೇ ತೀರುತ್ತವೆ.

ಪ್ರವಾಸ ಮಾಹಿತಿ:  ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಸಂಪರ್ಕಿಸಬಹುದು.

ಮುಖಪುಟ /ಪ್ರವಾಸಿತಾಣ