ಮುಖಪುಟ /ಸಾಹಿತ್ಯ

ಚಿಕ್ಕನಾಯಕನಹಳ್ಳಿಯಿಂದ ಸಮ್ಮೇಳನಾಧ್ಯಕ್ಷತೆವರೆಗೆ ಸಿ.ಪಿ.ಕೆ.

c.p.kಸಿ.ಪಿ.ಕೆ. ಎಂಬ ಮೂರಕ್ಷರದಿಂದ ಕನ್ನಡ ಸಾಹಿತ್ಯ ಪ್ರಿಯರಿಗೆ ಪರಿಚಿತರಾದ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಕವಿ, ಸಾಹಿತಿ, ಚಿಂತಕ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಯಾವುದೇ ಕವಿ, ಸಾಹಿತಿಗೆ ಸಲ್ಲುವ ಪರಮೋಚ್ಚ ಗೌರವ. ಅಂಥ ಮಹತ್ವದ ಘಟ್ಟವನ್ನು ಸಿ.ಪಿ.ಕೆ. ತಲುಪಿದ್ದಾರೆ.

ಡಿಸೆಂಬರ್ ೯, ೧೦ ಹಾಗೂ ೧೧ರಂದು ಗಂಗಾವತಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಮೈಸೂರು  ಜಿಲ್ಲೆ, ಕೃಷ್ಣರಾಜನಗರ ಚಿಕ್ಕನಾಯಕನಹಳ್ಳಿಯಲ್ಲಿ ೧೯೩೯ರ ಜನಿಸಿದ ಸಿಪಿಕೆ ಸಮ್ಮೇಳನಾಧ್ಯಕ್ಷ ಸ್ಥಾನದವರೆಗೆ ನಡೆದು ಬಂದ ದಾರಿ ದುರ್ಗಮವೇ. ಆದರೆ ಅದನ್ನು ತಮ್ಮ ಯಶಸ್ಸಿನ ಸೋಪಾನ ಮಾಡಿಕೊಂಡ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಸಿಪಿಕೆ ಈಗ ಸಾಧನೆಯ ಉತ್ತುಂಗ ತಲುಪಿದ್ದಾರೆ. ಚಿಕ್ಕನಾಯಕನಹಳ್ಳಿ ಮತ್ತು ಸಾಲಿಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದ ಸಿಪಿಕೆ ನಂತರ ಶಿವಮೊಗ್ಗೆಯಲ್ಲಿ ಅವರು ಇಂಟರ್ ಮೀಡಿಯೆಟ್ ಶಿಕ್ಷಣ ಪೂರ್ಣಗೊಳಿಸಿದರು. ಆನಂತರ ಸರಸ್ವತಿಯ ಆವಾಸ ಸ್ಥಾನ ಎಂದೇ ಹೆಸರಾಗಿದ್ದ ಮೈಸೂರಿನ ಮಹಾರಾಜ ಕಾಲೇಜು ಸೇರಿ ಕನ್ನಡದಲ್ಲಿ ಬಿ.ಎ. ಆನರ್ಸ್ ನಂತರ ಮಾನಸಗಂಗೋತ್ರಿಯಿಂದ ಎಂ.ಎ. ಪದವಿಯನ್ನು ಪ್ರಥಮ ದರ್ಜೆಯಲ್ಲಿ  ಪಡೆದರು.

ಬಳಿಕ ನಾಗವರ್ಮನ ಕರ್ಣಾಟಕ ಕಾದಂಬರಿ : ಒಂದು ತೌಲನಿಕ ಮತ್ತು ವಿಮರ್ಶಾತ್ಮಕ ಅದsಯನ ಎಂಬ ವಿಷಯದ ಮೇಲೆ ಅವರು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್.ಡಿ. ಪದವಿ ನೀಡಿತು. ಜ್ಞಾನದಾಹಿಯಾದ ಅವರು, ಭಾರತೀಯ ವಿದ್ಯಾಭವನದಿಂದ ಸಂಸ್ಕೃತ ಕೋವಿದ ಪದವಿಯನ್ನೂ ಪಡೆದರು.

೧೯೬೧ರಲ್ಲಿ ಮೈಸೂರಿನ ಪ್ರಾಚ್ಯ ವಿದ್ಯಾಸಂಶೋಧನಾಲಯದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸಕ್ಕೆ ಸೇರಿದ ಸಿಪಿಕೆ ೬೪ರವರೆಗೆ ಅಲ್ಲಿ ಸೇವೆ ಸಲ್ಲಿಸಿದರು. ಅನಂತರ ತಾವು ಓದಿದ ಮಹಾರಾಜ ಕಾಲೇಜಿನಲ್ಲಿ ಮೂರು ವರ್ಷ ಕನ್ನಡ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

೧೯೬೭ರಲ್ಲಿ ಮಾನಸಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ಸೇರಿದ ಸಿಪಿಕೆ, ರೀಡರ್ ಆಗಿ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹದಿಮೂರು ವರ್ಷ ಸೇವೆ ಸಲ್ಲಿಸಿ, ೧೯೮೦ರಲ್ಲಿ ಅಲ್ಲೆ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಎರಡು ವರ್ಷ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಹದಿನೆಂಟು ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣಮಂಡಳಿಯ ಸದಸ್ಯರಾಗಿ, ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅವರು ೧೯೯೯ರಲ್ಲಿ ನಿವೃತ್ತರಾಗಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ನಿವೃತ್ತಿಯ ನಂತರವೂ ಒಂದು ವರ್ಷ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಕಾವ್ಯಾಧ್ಯಯನ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿವಿ ಪ್ರಸಾರಾಂಗದ ಗ್ರಂಥಪ್ರಕಟಣಾ ಸಮಿತಿಯ ಅಧ್ಯಕ್ಷರಾಗಿ, ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ಪುಸ್ತಕ ಪ್ರಪಂಚ ಪತ್ರಿಕೆಯ ಸಂಪಾದಕ ಮಂಡಲಿ, ಸಮಗ್ರ ವಚನ ಸಂಪುಟಗಳ ಸಂಪಾದಕ ಮಂಡಳಿ, ರಾಜ್ಯ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಉನ್ನತ ಸಮಿತಿ, ಪಂಪಪ್ರಶಸ್ತಿ ಆಯ್ಕೆ ಸಮಿತಿ, ವಿಶ್ವವಿದ್ಯಾನಿಲಯದ ಕನಕ ಪೀಠದ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಜ್ಯಮಟ್ಟದ ಮತ್ತು ರಾಷ್ ಮಟ್ಟದ ಹಲವಾರು ವಿಚಾರಸಂಕಿರಣಗಳಲ್ಲಿ, ಕಮ್ಮಟಗಳ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಸಿಪಿಕೆ ಶಿವಮೊಗ್ಗೆಯಲ್ಲಿ ನಡೆದ ಅಖಿಲಭಾರತ ೪೯ನೆ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷ್ ಂತರ ಗೋಷ್ಠಿಯ ಅಧ್ಯಕ್ಷರಾಗಿದ್ದರು. ೧೯೭೧ರಲ್ಲಿ ನಾಗಮಂಗಲದಲ್ಲಿ ನಡೆದ ಜಾನಪದ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷರಾಗಿದ್ದರು. ೧೯೯೦ರಲ್ಲಿ ನಡೆದ ತಿ.ನರಸೀಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹಾಗೂ  ಅದೇ ವರ್ಷ ಜರುಗಿದ ಮಂಡ್ಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

೧೯೯೪ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ೧೯೯೭ರಲ್ಲಿ ಗುಂಡ್ಲುಪೇಟೆಯಲ್ಲಿ ನಡೆದ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಹುಬ್ಬಳ್ಳಿಯಲ್ಲಿ ನಡೆದ(ಕ.ವಿ. ನಿಲಯದ) ಅಖಿಲ ಕರ್ನಾಟಕ ಜಾನಪದ ಸಮ್ಮೇಳನ, ಬಾಳೆಹೊನ್ನೂರಿನಲ್ಲಿ ಜರುಗಿದ ಅಖಿಲ ಕರ್ನಾಟಕ ಚುಟುಕು ಸಮ್ಮೇಳನ, ಸಕಲೇಶಪುರದಲ್ಲಿ ನಡೆದ ಅಖಿಲ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಪದವಿಗಳನ್ನು ಕೂಡ ಸಿ.ಪಿ.ಕೆ. ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಅವರ ವಚನವಿಲೋಕನ ಕೃತಿಗೆ ಬಸವವೇದಿಕೆಯ ಬಸವ ಸಾಹಿತ್ಯಶ್ರೀ ಪುರಸ್ಕಾರವನ್ನೂ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಕಾವ್ಯಾನಂದ ಪುರಸ್ಕಾರ, ಮುಕ್ತಕ ಸಾಹಿತ್ಯ ಅಕಾಡೆಮಿಯ ಹನಿಗವನ ಹರಿಕಾರ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಸಿ.ಪಿ.ಕೆ. ಪಾತ್ರರಾಗಿದ್ದಾರೆ.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ರಮಣಶ್ರೀ ಶರಣ ಪ್ರಶಸ್ತಿ, ಸೀತಾಸುತ ಪ್ರಶಸ್ತಿ, (ಕರ್ನಾಟಕ ರಕ್ಷಣಾ ವೇದಿಕೆಯ) ವಿಶ್ವಮಾನವ ಕುವೆಂಪು ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿತ್ತಿನ ನೃಪತುಂಗ ಸಾಹಿತ್ಯ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ ಮತ್ತು ಮೈಸೂರು ರೋಟರಿ ಉತ್ತರ ರಾಜ್ಯೋತ್ಸವ ಪ್ರಶಸ್ತಿ, ಚುಟುಕುರತ್ನ ಪ್ರಶಸ್ತಿಗಳೂ ಸಿಪಿಕೆ ಮುಡಿಗೇರಿವೆ.

೧೯೯೦ರಲ್ಲಿ ಸಿ.ಪಿ.ಕೆ. ಅವರಿಗೆ ಸಾರ್ಥಕ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗಿದೆ. ಸಿ.ಪಿ.ಕೆ. ಸುಮಾರು ಮುನ್ನೂರು ಕೃತಿ ರಚಿಸಿದ್ದಾರೆ. ಕಾವ್ಯ (ಕವನ, ಹನಿಗವನ, ಖಂಡಕಾವ್ಯ, ವಚನ, ಮುಕ್ತಕ)ಗಳಾದ ಅಂತರತಮ, ಅನಂತ-ಪೃಥ್ವೀ, ಅಹನ್ಯಹನಿ, ಆಯ್ದ ನೂರೊಂದು ಕವನ, ಎಪ್ಪತ್ತರ ಎತ್ತರ, ಒಳದನಿ, ಕಣ ಕ್ಷಣ, ಕನವರಿಕೆ, ಕನ್ನಡಿಯ ಕಿಚ್ಚು, ಕವಿತೆ ನಿಲ್ಲುವುದಿಲ್ಲ, ಕಾರಣಿಕ ವಚನಗಳು, ಚಿಕ್ಕೆ ಚೂರು, ಚೋದ್ಯ ಕುಚೋದ್ಯ, ತಾರಾಸಖ, ತೊಟ್ಟುಗಳು, ನೀವೆ ನಮಗೆ ದಿಕ್ಕು, ನೂರೊಂದು, ಪದ ಪದರ, ಪ್ರಕೃತಿ, ಪರ್ಯಾಯ, ಬಿಂದು ಬೆರಗು ಮುಂತಾದವು, ಕಿರಣ ತೋರಣ, ಕೋಲ್ಮಿಂಚು, ಚಿಂತನ ಚಯ, ಚಿಂತನ ಬಿಂದು, ಚಿಂತನ ಧಾರೆ, ಚಿಂತನ ಹಾರ, ಚಿಲುಮೆ, ಜಾಜಿ ಮಲ್ಲಿಗೆ, ದೀಪ ಸ್ಮಿತ, ನವನೀತ, ಬಿಗು ಲಘು, ಮಣಿಗಣ, ಮಣಿ ಮಾಲೆ, ಮೆಲುಕು, ವಿಚಾರ ತುಷಾ, ವಿಚಾರ ನಿಮಿಷ, ಮುಂತಾದ ಚಿಂತನ ಪ್ರಬಂದಗಳನ್ನು ರಚಿಸಿದ್ದಾರೆ. ಅಧ್ಯಯನ, ಆಲೋಚನ, ಈ ಕ್ಷಣ, ಉಪಚಯ, ಎರಡು ಜೈನ ಪುರಾಣಗಳು, ಐವರು ವಚನಕಾರರು, ಕನಕ : ಕೆಲವು ಮುಖ, ಕನ್ನಡ ಕಾವ್ಯ : ಹತ್ತು ವರು, ಕನ್ನಡದ ಕಾರಣ, ಕನ್ನಡ ಚತುರ್ಮುಖ, ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್  ಪ್ರಭಾವ, ಕನ್ನಡ ಸಂಸ್ಕೃತ ಸಂಬಂಧ, ಮುಂತಾದವುಗಳು ವಿಚಾರ ವಿಮರ್ಶೆ ಸಂಶೋಧನೆಗಳಾಗಿವೆ. ಭಾಷಾಂತರ ಇಂಗ್ಲಿಷಿನಿಂದ (ಸೃಜನಶೀಲ) - ಕೃತಿ ಪ್ರತಿ, ಗೀತಾಂಜಲಿ, ಠಾಕೂರ್ ವಚನಾಂಜಲಿ, ತಾಯಿ, ನಿಶ್ಶಬ್ದದಲ್ಲಿ ಕವಿ, ನೋವಿನ ದೇವತೆಗೆ, ಪುರಾತನ ನಾವಿಕ, ಹನ್ನೊಂದು ಹೊರಗಿನ ಕತೆಗಳು, ಇತಿಹಾಸ ಪುರಾಣಗಳು, ಎಲಿಯಟ್ಟನ ಮೂರು ಉಪನ್ಯಾಸಗಳು, ಕಲಾ ತತ್ತ್ವ ಮುಂತಾದುವುಗಳು. ಭಾಷ್ ಂತರ ಗ್ರೀಕ್‌ನಿಂದ (ಇಂಗ್ಲಿಷ್  ಮೂಲಕ) - ಅಗಮೆಮ್ನನ್, ಈಸ್ಕಿಲಸ್‌ನ ಎರಡು ನಾಟಕಗಳು, ಏಳು ಗ್ರೀಕ್ ನಾಟಕಗಳು, ಫಿಲೋಕ್ಟೆಟಿಸ್, ಮೀಡಿಯ, ಹಿಪ್ಪೋಲಿಟಸ್, ಹೆಲೆನ್. ಭಾಷ್ ಂತರ : ಸಂಸ್ಕೃತ ಪ್ರಾಕೃತದಿಂದ - ಅಭಿಜ್ಞಾನ ಶಾಕುಂತಲ, ಊರುಭಂಗ, ಹತ್ತು ಸಂಸ್ಕೃತ ಪ್ರಾಕೃತ ಕಾವ್ಯಗಳು, ಕನ್ನಡ ಉತ್ತರ ರಾಮಚರಿತ, ಕನ್ನಡ ಕುಮಾರ ಸಂಭವ, ಮುಂತಾದವುಗಳು. ಜಾನಪದ - ಒಗಟು ಮತ್ತು ಗಾದೆ, ಕಾಡಿನ ಹಾಡುಗಳು, ಗಂಧದ ಕೋಟೆ ಗಮಗಮ, ಚೆಲುವಯ್ಯ-ವರನಂದಿ, ಚುಂಚನಗಿರಿ(ಸಂ.ಇತರರೊಡನೆ), ಜನಪದ ಗೀತೆ, ಜನಪದ ಸಾಹಿತ್ಯ ಪ್ರವೇಶಿಕೆ ಮುಂತಾದವುಗಳು. ವ್ಯಕ್ತಿಚಿತ್ರ  - ಬಸವೇಶ್ವರ, ರತ್ನತಂ i, ರಾಮಕೃಷ್  ಪರಮಹಂಸರು, ಶ್ರೀ ರಾಮಕೃಷ್  ವಿವೇಕ ಶಾರದಾ, ಶ್ರೀ ಶಾರದಾದೇವಿ, ಸಾಕ್ರಟೀಸ್, ಸ್ವಾಮಿ ವಿವೇಕಾನಂದ, ಹಿರಿಯರ ಗೆರೆಗಳು. ಹಾಸ್ಯ ವಿಡಂಬನೆಕೃತಿಗಳು- ನಗು ಬಿಗು, ಮಧ್ಯಾಹ್ನದ ನಿದ್ದೆ. ಗ್ರಂಥಸಂಪಾದನೆ:  ಅರಣ್ಯ ಪರ್ವ ಮುಂತಾದವು. ಇತರ ಸಂಪಾದನೆ- ಅಂತಃಕರಣ(ಇತರರೊಡನೆ), ಅಮೃತ ಸಂಪುಟ(ಇತರರೊಡನೆ), ಆಯ್ದ ಕುವೆಂಪು ಕವನಗಳು, ಇಕ್ಷು ಕಾವೇರಿ(ಇತರರೊಡನೆ), ಕಟ್ಟೀಮನಿ : ಬದುಕು-ಬರಹ(ಇತರರೊಡನೆ), ಕನ್ನಡ ಛಂದಸ್ಸಿನ ಚರಿತ್ರೆ ೧, ಕನ್ನಡ ಛಂದಸ್ಸಿನ ಚರಿತ್ರೆ ೨ ಮುಂತಾದವುಗಳು. ಮಕ್ಕಳ ಸಾಹಿತ್ಯ ಕೃತಿಗಳು-

ಏನು? ಏಕೆ? ಹೇಗೆ?, ಪರಮಹಂಸ ಕಥಾವಳಿ, ಪರಮಹಂಸರ ಕಥೆಗಳು, ಶ್ರೀ ರಾಮಕೃಷ್ ರ ಕಥೆಗಳು, ಸಂಕೀರ್ಣ- ಅಹಿಂಸೆ, ಕುಮಾರವ್ಯಾಸನ ಹತ್ತು ಚಿತ್ರಗಳು, ಜನಪದ ಪ್ರಣಯ ಪ್ರಸಂಗಗಳು, ಕುವೆಂಪು ಸಂದರ್ಶನ, ಮಹಾಕವಿಯೊಡನೆ ಮಾತುಕತೆ ಮುಂತಾದವುಗಳು.  

ಮುಖಪುಟ /ಸಾಹಿತ್ಯ