ಮುಖಪುಟ /ಸಾಹಿತ್ಯ

ನಾಡು, ನುಡಿ, ಜಲ, ರಕ್ಷಣೆ ಎಲ್ಲರ ಹೊಣೆ- ವೀರೇಂದ್ರ ಹೆಗ್ಗಡೆ

Dr. veerendra Hegadeಬೆಂಗಳೂರು, ಫೆ. ೬- ಕನ್ನಡ ನೆಲ, ಜಲ, ನಾಡು, ನುಡಿಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಮೂರು ದಿನಗಳ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸತತ ೮೦ ವರ್ಷಗಳ ಕಾಲ ಧರ್ಮಸ್ಥಳದಲ್ಲಿ ಸಮ್ಮೇಳನ ನಡೆಸಿದ ಪುಣ್ಯದ ಫಲದಿಂದ ತಾವಿಂದು ಇಲ್ಲಿ ಕುಳಿದಿರುವುದಾಗಿ ಹೇಳಿದರು.

ಕನ್ನಡ ನಾಡು ಇನ್ನೂ ಸಮೃದ್ಧವಾಗಿ ಬೆಳಗಲು, ಬೆಳೆಯಲು ಶ್ರೀಮಂಜುನಾಥ ಆಶೀರ್ವದಿಸಲಿ ಎದು ಹಾರೈಸಿದ ಅವರು, ಹಿರಿಯ ಜೀವಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನ ಸಂಪೂರ್ಣ ಸಾರ್ಥಕವಾಗಿದೆ ಎಂದು ಹೇಳಿದರು.

ಮುಖಪುಟ /ಸಾಹಿತ್ಯ