ಮುಖಪುಟ /ಸಾಹಿತ್ಯ

೨ನೇ ದಿನ ಎಲ್ಲವೂ ಅಚ್ಚುಕಟ್ಟು..

kasapaಬೆಂಗಳೂರು, ಫೆ.೫: ದೋಷ ಹುಡುಕಲೇ ಬೇಕು ಎಂದು ಲೋಪ ಹುಡುಕಬಾರದು, ಇಷ್ಟು ದೊಡ್ಡ ಸಮ್ಮೇಳವ ಎಂದಾಗ, ಲಕ್ಷಾಂತರ ಜನ ಬಂದಾಗ ಚಿಕ್ಕಪುಟ್ಟ ಲೋಪ ಇರುತ್ತದೆ, ಅದನ್ನು ದೊಡ್ಡದು ಮಾಡಬಾರದು ಎಂಬುದು ಬೆಂಗಳೂರಿಗೆ ಬಂದಿರುವ ಕೆಲವು ಸಾಹಿತ್ಯಾಸಕ್ತರು ಹೇಳಿದ ಮಾತು.

ಈ ಮಾತು ಎಷ್ಟು ಸತ್ಯ ಅಲ್ಲವೇ? ನಮ್ಮ ಮನೆಗಳಲ್ಲಿ  ಹಬ್ಬ ಹರಿದಿನಗಳು ನಡೆದರೆ, ನಿರೀಕ್ಷೆಗಿಂಥ ಹೆಚ್ಚು ಜನ ಬಂದರೆ ನಾವೇ ಕಂಗಾಲಾಗುತ್ತೇವೆ. ಅಂಥಹುದರಲ್ಲಿ, ೬೦ ಸಾವಿರ ಜನರಿಗೆ ಅಡುಗೆ ಮಾಡಿದಿದ್ದಾಗ ಲಕ್ಷ ಜನ ಬಂದರೆ ಗತಿ ಏನು? ಇಲ್ಲಿ ಆಗಿದ್ದೂ ಅದೇ. ಹೀಗಾಗಿ ನಾವೇ ಅನುಸರಿಸಿಕೊಂಡು ಹೋಗಬೇಕು. ಬೆಂಗಳೂರಿನಲ್ಲಿ ಬೇಕಾದಷ್ಟು ಹೋಟೆಲ್‌ಗಳಿವೆ. ಹೀಗಾಗಿ ಇದು ದೊಡ್ಡ ಸಮಸ್ಯೆಯೆ ಅಲ್ಲ ಎಂಬುದು ಸಾರ್ವಜನಿಕರ ನುಡಿ, ಆದರೆ, ೨೫೦ ರೂ. ನೀಡಿ ಪ್ರತಿನಿಧಿಗಳಾಗಿ ನೋಂದಾಯಿಸಿದವರು, ತಮಗೆ ಊಟ ಸಿಗದಿದ್ದಾಗ ತುಸು ಕೋಪಗೊಂಡಿದ್ದು ಸಹಜ.

ಪ್ರತಿನಿಧಿಗಳಿಗಾಗಿ ಬಂದ ಕೆಲವರು, ಸೂಕ್ತ ಊಟ, ವಸತಿ ವ್ಯವಸ್ಥೆ ಮಾಡಿಲ್ಲ ಎಂದು, ಸಿಟ್ಟು, ಸಿಡುಕು, ಆಕ್ರೋಶ ವ್ಯಕ್ತಪಡಿಸಿದರು, ಕೆಲವರು ಪ್ರತಿಭಟನೆಯನ್ನೂ ನಡೆಸಿದರು.

ನಿನ್ನೆ ಆದ ಪ್ರಮಾದ ಇಂದು ಮರುಕಳಿಸಬಾರದೆಂದು ಸಂಯೋಜಕರು, ಎಚ್ಚರಿಕೆ ವಹಿಸಿ, ಕೈಗೊಂಡ ಮುನ್ನೆಚ್ಚರಿಕೆ ಕ್ರಮದಿಂದಾಗಿ, ಇಂದು ಅಂಥ ಯಾವುದೇ ದೊಡ್ಡ ಮುಜುಗರದ ಸ್ಥಿತಿ ನಿರ್ಮಾಣವಾಗಲಿಲ್ಲ.

ಇಂದು ಕೈಗೊಂಡ ಅಚ್ಚುಕಟ್ಟಾದ ಸಿದ್ಧತಾ ಕಾರ್ಯ, ಊಟದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಉದಯಭಾನು ಕಲಾಸಂಘ ಹಾಗೂ ಕೋಟೆ ಪ್ರೌಢಶಾಲೆ ಮೈದಾನದಲ್ಲಿ ಹಸಿದು ಬಂದವರೆಲ್ಲ ಸಾಲಿನಲ್ಲಿ ನಿಂತು, ನಿರಾತಂಕವಾಗಿ ಊಟ ಮಾಡಿದರು. ಬಿಸಿಬೇಳೆ ಬಾತ್, ಅನ್ನ ತಿಳಿಸಾರು ಹಾಗೂ ಸೋಂಪಾಪುಡಿ (ಸಿಹಿ) ನಾಲಿಗೆಗೆ ರುಚಿ ನೀಡಿತು.

ಮುಖಪುಟ /ಸಾಹಿತ್ಯ