ಮುಖಪುಟ /ಸಾಹಿತ್ಯ

ಪೂರ್ವ ಜನ್ಮದ ಸುಕೃತ - ಅಶ್ವತ್ಥನಾರಾಯಣ

MLC Aswathanarayanಬೆಂಗಳೂರು, ಫೆ. ೫ - ಇಷ್ಟು ದಿನಗಳ ಕಾಲ ರಾಜಕೀಯ ಸಮಾರಂಭ ಏರ್ಪಡಿಸಿ ಮಾತ್ರವೇ ಅನುಭವ ಇತ್ತು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾಗುವ ಅವಕಾಶ ಸಿಕ್ಕಿದ್ದು, ತಮ್ಮ ಪೂರ್ವ ಜನ್ಮದ ಸುಕೃತ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ  ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅವಕಾಶ ತಮ್ಮ ಬದುಕಿನಲ್ಲೊಂದು ಮೈಲಿಗಲ್ಲು, ಸಾಹಿತ್ಯ ಸರಸ್ವತಿಯ ಸೇವೆ ಮಾಡುವ ಸೌಭಾಗ್ಯ ತಮ್ಮದಾಗಿದೆ ಎಂದು ವಿಶ್ಲೇಷಿಸಿದರು.

ಆಯೋಜನೆಯಲ್ಲಿ ಕೆಲವೊಂದು ಲೋಪಗಳಾಗಿವೆ ಎಂಬುದನ್ನು ಒಪ್ಪಿಕೊಂಡ ಅವರು, ಇಂಥ ಸಮ್ಮೇಳನ ನಡೆಸುವಾಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ ಜವಾಬ್ದಾರಿ ವಹಿಸುವುದು ಅಗತ್ಯ. ತಮ್ಮ ತಮ್ಮ ಜಿಲ್ಲೆಯಿಂದ ಬರುವ ಸದಸ್ಯರ ಊಟ, ವಸತಿಯ ಹೊಣೆಯನ್ನು ಆಯಾ ಜಿಲ್ಲೆಯ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ನಿರ್ವಹಿಸಿದೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಧಾವಂತದಲ್ಲೂ ಕನ್ನಡ ಪ್ರೇಮಿಗಳು ಸಮ್ಮೇಳನಕ್ಕೆ ನೀಡಿರುವ ಸ್ಪಂದನ ಅದ್ವಿತೀಯ ಎಲ್ಲರಿಗೂ ನಾವು ಆಭಾರಿಗಳು ಎಂದು ತಿಳಿಸಿದರು.

ಮುಖಪುಟ /ಸಾಹಿತ್ಯ