ಮುಖಪುಟ /ಪಾಕಶಾಲೆ

ಪಾಕಶಾಲೆಯಲ್ಲಿ ತೆಂಗಿನಕಾಯಿ, ಹುರಿಗಡಲೆ ಚಟ್ನಿಯ ಸಂಭ್ರಮ

ಸೊಗಸಾದ ಇಡ್ಲಿ ಮಾಡೋದು ತಿಳಿಸಿದ್ದೀರಿ? ಆದರೆ ಚೆಟ್ನಿ ಎಲ್ಲಿ ಎಂದು ಹೈದರಾಬಾದಿನ ರಾಜ್ಯಶ್ರೀ ಪ್ರಶ್ನಿಸಿದ್ದಾರೆ. ಹೌದು ಖಂಡಿತಾ ತಪ್ಪು ನಮ್ಮದೆ. ಚಟ್ನಿ ಇಲ್ಲದೆ ಇಡ್ಲಿ ತಿನ್ನಕ್ಕಾಗತ್ತ್ಯೇ? ಬನ್ನಿ ಚೆಟ್ನಿಯನ್ನೂ ಮಾಡೇ ಬಿಡೋಣ...

ಚಟ್ನಿಯಲ್ಲಿ ಹಲವು ಬಗೆ, ತೆಂಗಿನಕಾಯಿ ಚಟ್ನಿ, ಪುದೀನಾ ಚಟ್ನಿ, ಹುರಿಗಡಲೆ ಚೆಟ್ನಿ, ಮೆಣಸಿನಕಾಯಿ ಚಟ್ನಿ, ಸೀ ಚಟ್ನಿ, ಸವಾರಿ ಚಟ್ನಿ.... ಈ ಹೊತ್ತು ನಾವು ಕೆಂಪು ಮೆಣಸಿನ ಕಾಯಿ ಚಟ್ನಿ ಮತ್ತು ಹುರಿಗಡಲೆ ಚಟ್ನಿ ಮಾಡೋಣ.

ಬೇಕಾಗುವ ಪದಾರ್ಥ : ಒಂದು ಅರ್ಧ ಹೋಳು ತೆಂಗಿನಕಾಯಿ, ,೬ ಕೆಂಪು ಒಣಮೆಣಸಿನ ಕಾಯಿ, ನಾಲ್ಕಾರು ಎಸಳು ಕೊತ್ತಂಬರಿ ಸೊಪ್ಪು, ಉಪ್ಪು, ಸಾಸಿವೆ ಒಗ್ಗರಣೆ ಪದಾರ್ಥ.

ತಯಾರಿಸುವ ವಿಧಾನ : ಮೊದಲು ತೆಂಗಿನಕಾಯಿ ತುರಿದು, ತೆಂಗಿನ ತುರಿ, ಮೆಣಸಿನ ಕಾಯಿಗೆ ರುಚಿಗೆ ತಕ್ಕ ಉಪ್ಪು ಹಾಕಿ ಹದವಾಗಿ ನೀರನ್ನು ಬೆರೆಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ರುಬ್ಬಿ . ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ, ಮತ್ತೆ ಒಂದು ಸುತ್ತು ರುಬ್ಬಿ. ತರಿತರಿಯಾಗಿದ್ದರೆ ಚಟ್ನಿಯ ರುಚಿಯೇ ರುಚಿ. ಅದಕ್ಕೆ ತುಸು ಸಾಸಿವೆ ಅಥವಾ ಜೀರಿಗೆ ಇಂಗಿನ ಒಗ್ಗರಣೆ ಹಾಕಿದರೆ ಚಟ್ನಿ ಮತ್ತೂ ರುಚಿ.

 

ಮುಖಪುಟ /ಪಾಕಶಾಲೆ