ಮುಖಪುಟ /ಪಾಕಶಾಲೆ

ರುಚಿ ರುಚಿ ಸಿಹಿ ಪಪ್ಸ್

ಬೇಕಾಗುವ ಪದಾರ್ಥ : ೧ ಟೀ ಸ್ಪೂನ್ ಅಕ್ಕಿ ಹಿಟ್ಟು. ೧ ಕಪ್ ಮೈದ ಹಿಟ್ಟು, ೨ ಸ್ಪೂನ್ ಬಿಸಿ ಎಣ್ಣೆ ( ಕಡಲೆಕಾಯಿ ಎಣ್ಣೆಯಾದರು ಸರಿ ಅಥವ ವೆಜಿಟೆಬಲ್ ಆಯಿಲ್ ಆದರೂ ನಡೆಯುತ್ತದೆ) ಕರಿಯಲು ಎಣ್ಣೆ, ೧ ಕಪ್ ಸಕ್ಕರೆ ಪುಡಿ

ಮಾಡುವ ವಿಧಾನ: ಮೊದಲಿಗೆ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಲ್ಲಿ ತೆಗೆದುಕೊಂಡು ಅದಕ್ಕೆ ಬಿಸಿ ಎಣ್ಣೆಯನ್ನು ಹಾಕಿ ಅದನ್ನು ಪೇಸ್ಟಿಂತೆ ಮಾಡಿಕೊಳ್ಳಿ. ನಂತರ ಬೇರೆ ಬಟ್ಟಲಿನಲ್ಲಿ ಮೈದ ಹಾಗು ನೀರನ್ನು ಹಾಕಿ ಚೆನ್ನಾಗಿ ನಾದಿ, ಚಪಾತಿ ಹಿಟ್ಟಿನ ಹಾಗೆ ಮಾಡಿಕೊಳ್ಳಿ.

ಆಮೇಲೆ ಮೈದ ಹಿಟ್ಟಿನ ಸಣ್ಣ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪಾತಿಯಂತೆ ಲಟ್ಟಿಸಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನ ಪೇಸ್ಟನ್ನು ಸವರಿ ಅದನ್ನು ಸುತ್ತಿರಿ. ನಂತರ ಮತ್ತೆ ಒಂದು ಚಾಕುವನ್ನು ತೆಗೆದುಕೊಂಡು ಸಣ್ಣ ಸಣ್ಣ ಅಳತೆಗೆ ಕತ್ತರಿಸಿ ಅದನ್ನು ಪುನಾ ಪೂರಿಯಂತೆ ಲಟ್ಟಿಸಿ ಎಣ್ಣೆಯಲ್ಲಿ ಕರೆಯಿರಿ. ( ನೆನಪಿರಲಿ ಇದು ಪೂರಿ ಆಕಾರದಲ್ಲಿ ಇರಬೇಕು)

ಕರೆದ ಪೂರಿಯನ್ನು ತಣ್ಣಗಾಗಲು ಬಿಡಿ. ಆನಂತರ ಅದರ ಮೇಲೆ ಸಕ್ಕರೆ ಪುಡಿಯನ್ನು ಹರಡಿದರೆ ಸಿಹಿ ಪಪ್ಸ್ ತಿನ್ನಲು ರೆಡಿ. ಮಾಡಿ ತಿನ್ನುತ್ತೀರಲ್ಲಾ... ತಿಂದು ರುಚಿ ಹೇಗಿತ್ತೆಂದು ಬರೆದು ತಿಳಿಸುತ್ತೀರಲ್ಲಾ..

(ಈ ಹೊಸ ರುಚಿ ಮಾಡೋದು ಹೇಗೆಂದು ಬರೆದು ಕಳಿಸಿದವರು- ಶೋಭಾ ರಂಗೇಗೌಡ)

ಮುಖಪುಟ /ಪಾಕಶಾಲೆ