ಮುಖಪುಟ /ಪಾಕಶಾಲೆ

ಪೀಸ್ ಪಲಾವ್

ರಂಜನಿ ರಾಮಪ್ರಸಾದ್ ಅವರು ಕಳುಹಿಸಿದ ಹೊಸರುಚಿ

ಬೇಕಾಗುವ ಪದಾರ್ಥ: ದೊಡ್ಡಗಾತ್ರದ ಏಲಕ್ಕಿ-೫ ಲವಂಗ-೧೦, ಚಕ್ಕೆ-೧ ಇಂಚು, ತೇಜ್ ಪತ್ತ (ಪಲಾವ್ ಎಲೆ)-೩, ಹಸಿರು ಮೆಣಸಿನಕಾಯಿ-೬, ಶುಂಟಿ ಅಥವಾ ಶುಂಟಿ ಬೆಳ್ಳುಳ್ಳಿ ಪೇಸ್ಟ್-೧ಸ್ಪೂನ್, ಗೋಡಂಬಿ, ಕೊತ್ತಂಬರಿ ಸೊಪ್ಪು, ಬಟಾಣಿ-೧ ಕಪ್, ಬಾಸ್ಮತಿ ಅಕ್ಕಿ-೨ ಕಪ್, ತುಪ್ಪ-೪ ಸ್ಪೂನ್, ಎಣ್ಣೆ-೬ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು .

ಮಾಡುವ ವಿಧಾನ: ದೊಡ್ಡ ಏಲಕ್ಕಿ,ಚಕ್ಕೆ,ಲವಂಗ ಇವನ್ನು ಹಾಗೆ ಪುಡಿ ಮಾಡಿ.

ಹಸಿರು ಮೆಣಸಿನಕಾಯಿ,ಶುಂಟಿ,ಮೇಲಿನ ಪುಡಿ ಸೇರಿಸಿ ರುಬ್ಬಿಕೊಳ್ಳಿ,ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು.ಆಕ್ಕಿಯನ್ನು ೧೦ ನಿಮಿಷ ನೀರಿನಲ್ಲಿ ನೆನಸಿಡಿ.

ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ರುಬ್ಬಿರುವ ಪೇಸ್ಟ್ ಹಾಕಿ ೨ ನಿಮಿಷ ಕುದಿಸಿ.ನಂತರ ಅಕ್ಕಿ ಹಾಕಿ ೨ ನಿಮಿಷ ಕುದಿಸಿ.ಆಮೇಲೆ ಇದನ್ನು ರೈಸ್ ಕುಕ್ಕರ್ ಅಥವ ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಬೇಯಿಸಬಹುದು.ಒಂದಕ್ಕೆ ೨ ರಷ್ಟು ನೀರು ಇಡಬೇಕು.

ಪಲಾವ್ ಆದ ನಂತರ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಅದರ ಮೇಲೆ ಉದುರಿಸಿ.ತುಪ್ಪದಲ್ಲಿ ಗೋಡಂಬಿ ಹುರಿದು ಹಾಕಿ.ನಿಮ್ಮ ಪೀಸ್ ಪಲಾವ್ ರೆಡಿ.

ಮುಖಪುಟ /ಪಾಕಶಾಲೆ