ಮುಖಪುಟ /ಪಾಕಶಾಲೆ

ಮೊಸರು ವಡೆ

ಗರಿಗರಿ ಉದ್ದಿನ ವಡೆಗೆ ಮೊಸರು ಒಗ್ಗರಣೆ ಸೇರಿಸಿ ತಯಾರಿಸುವ ಖಾದ್ಯವೇ ಮೊಸರು ವಡೆ.

ಬೇಕಾಗುವ ಪದಾರ್ಥ : ಉದ್ದಿನವಡೆ ತಯಾರಿಕೆಗೆ ಬೇಕಾದ ಪದಾರ್ಥದ ಜೊತೆಗೆ ಅರ್ಧ ಲೀಟರ್ ಮೊಸರು, ಒಂದು ಪಾತ್ರೆಯಲ್ಲಿ ಬಿಸಿನೀರು, ಸಾಸಿವೆ ಒಗ್ಗರಣೆಗೆ ಒಂದು ಚಮಚದಷ್ಟು ಸಾಸಿವೆ, ನಾಲ್ಕಾರು ಹಸಿ ಮೆಣಸಿನ ಕಾಯಿ, ತೆಂಗಿನಕಾಯಿಯ ಅರ್ಧ ಹೋಳು, ಹಸಿಶುಂಠಿ.

ತಯಾರಿಸುವ ವಿಧಾನ : ಮೊದಲು ಉದ್ದಿನವಡೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಆನಂತರ ಮೊಸರಿಗೆ ಹಸಿಶುಂಠಿ ಚೂರು, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ತೆಂಗಿನಕಾಯಿ ಹೋಳು ಹಾಕಿ, ಅದಕ್ಕೆ ಸಾಸಿವೆ, ಮುರಿದ ಹಸಿ ಮೆಣಸಿನಕಾಯಿ ಒಗ್ಗರಣೆ ಹಾಕಿ. ತದನಂತರ ಬಿಸಿ ನೀರಿನ ಪಾತ್ರೆಗೆ ಸಿದ್ಧಪಡಿಸಿಟ್ಟುಕೊಂಡ ವಡೆಗಳನ್ನು ಹಾಕಿಡಿ. ಸ್ವಲ್ಪ ಸಮಯದ ನಂತರ ವಡೆಗಳನ್ನು ತೆಗೆದು ಒಗ್ಗರಣೆ ಹಾಕಿದ ಮೊಸರಿನಲ್ಲಿ ನೆನೆಹಾಕಿ ಬಳಿಕ ಬೌಲ್‌ಗೆ ಹಾಕಿದರೆ ತಿನ್ನಲು ಮೃದುವಾದ ಮೊಸರುವಡೆ ರೆಡಿ.

 

ಮುಖಪುಟ /ಪಾಕಶಾಲೆ