ಮುಖಪುಟ /ಪಾಕಶಾಲೆ

ಮೆಂತೆಸೊಪ್ಪಿನ ವಡೆ

ಬೇಕಾಗುವ ಪದಾರ್ಥ :೪ ಲೋಟದಷ್ಟು ಕಡಲೆ ಹಿಟ್ಟು, ೬ ಕಟ್ಟು ಮೆಂತೆಸೊಪ್ಪು, ೧ ಕಟ್ಟು ಕೊತ್ತಂಬರಿಸೊಪ್ಪು, ೧೦- ೧೨ ಹಸಿ ಮೆಣಸಿನಕಾಯಿ, ೧ ಚಮಚ ಜೀರಿಗೆ ಪುಡಿ, ೧ ಚಮಚದಷ್ಟು ಖಾರಾಪುಡಿ, ೪ ಆಲೂಗೆಡ್ಡೆ, ಕರಿಬೇವಿನ ಎರಡು ಮೂರು ಎಸಳು, ಕಾಲು ಚಮಚದಷ್ಟು ಅಡಿಗೆ ಸೋಡ, ಚಿಟಿಕೆ ಇಂಗು ಮತ್ತು ಕರಿಯಲು ಎಣ್ಣೆ.

ತಯಾರಿಸುವ ವಿಧಾನ : ಮೊದಲು ಮೆಂತೆ ಸೊಪ್ಪು, ಆಲೂಗೆಡ್ಡೆಯನ್ನು ನೀರಲ್ಲಿ ತೊಳೆದು ಸಣ್ಣಗೆ ಹೆಚ್ಚಿ ಪಾತ್ರೆಯೊಂದರಲ್ಲಿ ಹಾಕಿ. ಅದಕ್ಕೆ ಅರ್ಧ ಲೋಟ ನೀರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಣ್ಣ ಉರಿಯ ಒಲೆಯ ಮೇಲೆ ಐದು ನಿಮಿಷ ಇಟ್ಟು ಬೇಯಿಸಿ.

ಆನಂತರ ಹಸಿ ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವನ್ನು ಸಣ್ಣಗೆ ಹೆಚ್ಚಿಟ್ಟುಕೊಂಡು ಅದನ್ನು ಕಡಲೇ ಹಿಟ್ಟಿನೊಂದಿಗೆ ಸೇರಿಸಿ, ಇಂಗು, ಜೀರಿಗೆ ಬೆರೆಸಿ ಕಡಲೇ ಹಿಟ್ಟಿನೊಂದಿಗೆ ಕಲೆಸಿ, ಆನಂತರ ಬೆಂದ ಮೆಂತೆಸೊಪ್ಪು, ಆಲೂಗೆಡ್ಡೆಯನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಬೆರೆಸಿ. ಅದಕ್ಕೆ ಅಡಿಗೆ ಸೋಡ, ಕಾರಾಪುಡಿ ಮತ್ತು ನೀರು ಸೇರಿಸಿ ಹದವಾಗಿ ಕಲೆಸಿ. ಆ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ನಂತರ ತಟ್ಟಿ (ಸಣ್ಣ ಉರಿ) ಕಾದ ಎಣ್ಣೆಯ ಬಾಣಲೆಯಲ್ಲಿ ಕರಿದರೆ ಬಿಸಿಬಿಸಿ ಮೆಂತೆಸೊಪ್ಪಿನ ವಡೆ ಸಿದ್ಧ.

ಮುಖಪುಟ /ಪಾಕಶಾಲೆ