ಮುಖಪುಟ /ಪಾಕಶಾಲೆ

ಮಾವಿನಕಾಯಿ ಪಚಡಿ
ಬಹು ಉಪಯೋಗಿ ದಿಢೀರ್ ಖಾದ್ಯ

ಬೇಕಾಗುವ ಪದಾರ್ಥಗಳು ಗಿಣಿಮೂತಿ ಮಾವಿನಕಾಯಿ, ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಸಾಸಿವೆ.

ಮಾಡುವ ವಿಧಾನ : ಮಾವಿನ ಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಹೋಳು ಮಾಡಿಕೊಳ್ಳಿ. ನಾಲ್ಕು ಜನರ ಕುಟುಂಬಕ್ಕಾದರೆ ಅರ್ಧ ಹೋಳು ಗಿಣಿಮೂತಿ ಮಾವಿನ ಕಾಯಿ ಸಾಕು. ಅರ್ಧ ಹೋಳನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿಕೊಂಡು ತುಸು ಗಟ್ಟಿಯಾಗುವಂತೆ ನೋಡಿಕೊಂಡು ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ನೀರು ಕುದಿಯುತ್ತಿದ್ದಾಗ ತುಸು ಅಡುಗೆ ಅರಿಶಿನ ಹಾಕಿ. ಬೆಂದಾದ ಬಳಿಕ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ.

ಅರ್ಧ ಹೋಳು ತೆಂಗಿನಕಾಯಿಯನ್ನು ತುರಿದು ಅದಕ್ಕೆ ಕತ್ತರಿಸಿದ ನಾಲ್ಕು ಹಸಿರು ಮೆಣಸಿನ ಕಾಯಿ ಮತ್ತು ಐದಾರು ಕಾಳು ಸಾಸಿವೆ ಹಾಕಿ ಒರಳಿನಲ್ಲಿ ಅಥವಾ ಮಿಕ್ಸರ್ ಗ್ರೈಂಡರ್ ನಲ್ಲಿ ರುಬ್ಬಿಕೊಳ್ಳಬೇಕು.

ಬೆಂದಿರುವ ಮಾವಿನಕಾಯಿಗೆ  ರುಬ್ಬಿರುವ ಮಸಾಲೆಯನ್ನು ಬೆರೆಸಿ, ಮತ್ತೆ ಕುದಿಯಲು ಇಡಬೇಕು. ಸಿಹಿ ಬಯಸುವವರು ಬೆಲ್ಲದ ಅಚ್ಚನ್ನು ಕತ್ತರಿಸಿ ಒಂದು ತುಂಡು ಬೆಲ್ಲ ಸೇರಿಸಬಹುದು.

ಹದವಾಗಿ ಕುದ್ದ ಬಳಿಕ, ಮೆಂತ್ಯ, ಕರಿಬೇವು, ಸಾಸಿವೆ ಒಗ್ಗರಣೆ ಹಾಕಿದರೆ ಪಚಡಿ ರೆಡಿ.

ಈ ಪಚಡಿಯನ್ನು ಚಪಾತಿ, ಪೂರಿಗೆ ನೆಂಚಿಕೊಳ್ಳಲು ಬಳಸಬಹುದು. ಅನ್ನಕ್ಕೆ ಹಾಕಿ ಕಲಸಿಕೊಳ್ಳಬಹುದು. ಊಟದ ಜೊತೆ ಹೆಚ್ಚುವರಿ ಖಾದ್ಯವಾಗಿಯೂ ಬಳಸಬಹುದು.

(ಈ ಹೊಸರುಚಿಯನ್ನು ಕಳುಹಿದವರು. ಮಲ್ಲೇಶ್ವರದ ಚಿತ್ರಾ ವೆಂಕಟೇಶ್)

ಮುಖಪುಟ /ಪಾಕಶಾಲೆ