ಮುಖಪುಟ /ಪಾಕಶಾಲೆ

ಲಾಡು ಎಂಬ ಸಿಂಪಲ್ ಸಿಹಿ
ಸಿಂಪಲ್ ಸ್ವೀಟ್ ಯಾವುದು ಹೇಳಿ
? ಅದುವೇ ಲಾಡು, ಬನ್ನಿ ನಾವೂ ಲಡ್ಡು ಮಾಡೋಣ

ಲಾಡು ಮಾಡೋದು ತುಂಬಾನೇ ಸುಲಭ.. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೊರಕುವ ಪ್ರಸಾದ ಲಾಡು. ನಂಜನಗೂಡು, ಶ್ರೀರಂಗಪಟ್ಟಣದಲ್ಲೂ ಈಗ ಲಡ್ಡು ಪ್ರಸಾದ ಲಭ್ಯ. ಮದುವೆ, ಮುಂಜಿಯ ಮನೆಯಲ್ಲೂ ಸಾಮಾನ್ಯವಾಗಿ ಲಾಡು ಕಾಣಬರುತ್ತದೆ. ಲಾಡು ಸುಲಭವಾದ ಸಿಹಿ.

ಲಾಡು ಮಾಡುವುದು ಸುಲಭ. ಹೀಗಾಗೆ ಸಣ್ಣ ಪುಟ್ಟ ಸಮಾರಂಭಗಳಲ್ಲಿ ರಾರಾಜಿಸುವ ಸಿಹಿ ಲಾಡು. ನೀವೂ ಲಾಡು ಮಾಡಿ, ತಿಂದೇಬಿಡಿ.

ಬೇಕಾಗುವ ಪದಾರ್ಥ :ಒಂದು ಕೆಜಿಯಷ್ಟು ಸಕ್ಕರೆ, ಕಾಲು ಲೀಟರ್ ಹಾಲು, ಹತ್ತು ಹನ್ನೆರಡು ಏಲಕ್ಕಿ, ಕೇಸರಿ ದಳ, ಒಂದು ಗಿಟಕು ಕೊಬ್ಬರಿ, ದ್ರಾಕ್ಷಿ, ಗೋಡಂಬಿ ೨೫೦ ಗ್ರಾಂನಷ್ಟು ಜೊತೆಗೆ ಇಪ್ಪತ್ತೈದು ಲವಂಗ.

ಲಡ್ಡು ಮಾಡುವ ವಿಧಾನ : ಮೊದಲು ಶುದ್ಧವಾದ ಕಡಲೆಹಿಟ್ಟುನ್ನು ವಂದರಿಯಲ್ಲಿ ವಂದರಾಡಿಕೊಂಡು ನೀರು ಹಾಕಿ ಇಡ್ಲಿ ಹಿಟ್ಟಿನ ಹಾಗೆ ಕಲಸಿಡಬೇಕು. ಆನಂತರ ದೊಡ್ಡ ಬಾಣಲೆಯನ್ನು ಒಲೆಯ ಮೇಲೆಟ್ಟು ತುಪ್ಪ ಅಥವಾ ರೀಫೈನ್ಡ್ ಆಯಿಲ್ ಹಾಕಬೇಕು.

ಎಣ್ಣೆ ಅಥವಾ ತುಪ್ಪ ಕಾದ ಮೇಲೆ ಜಾಲರಿಯನ್ನು ಬಾಣಲೆಯ ಮೇಲಿಟ್ಟು ಹಿಟ್ಟು ಹಾಕಿ, ಒಂದೆರಡು ಬಾರಿ ಜಾಲಾರಿಯನ್ನು ಮೇಲೆ ಕೆಳಗೆ ಅಲುಗಾಡಿಸಿದರೆ, ಸಣ್ಣಸಣ್ಣ ಗೋಲಾಕಾರದ ಹಿಟ್ಟು ಕಾದ ಎಣ್ಣೆಯಲ್ಲಿ ಬಿದ್ದು ಬೂಂದೀ ಅಥವಾ ಲಾಡು ಕಾಳಾಗಿ ಪರಿವರ್ತನೆಯಾಗುತ್ತದೆ.

ಚೆನ್ನಾಗಿ ಕರಿದ ಕಾಳುಗಳನ್ನು ಜಾಲರಿಯಲ್ಲಿ ಎಣ್ಣೆ ಸೋಸಿ ತೆಗೆದು ಬುಟ್ಟಿ ಅಥವಾ ರಂಧ್ರವಿರುವ ಪಾತ್ರೆಗೆ ಹಾಕಿಕೊಳ್ಳಿ. ಕಾಳು ಸಿದ್ಧವಾದ ಬಳಿಕ. ಹಾಲು ಮತ್ತು ಸಕ್ಕರೆ ಹಾಕಿ ಸಕ್ಕರೆ ಪಾಕದ ಮಿಶ್ರಣ ಮಾಡಿಕೊಳ್ಳಿ ಏಲಕ್ಕಿ ಪುಡಿ, ಕೇಸರಿದಳವನ್ನೂ ಪಾಕದೊಡನೆ ಸೇರಿಸಿ.

ಇದಾದ ಬಳಿಕ ಲಾಡು ಕಾಳುಗಳನ್ನು ಹಾಗೂ ಸ್ವಲ್ಪ ಸ್ವಲ್ಪ ಪಾಕ ಸೇರಿಸಿ ನಿಮ್ಮ ಅನುಕೂಲಕ್ಕೆ ತಕ್ಕ ಗಾತ್ರದ ಉಂಡೆ ಕಟ್ಟಿ ಲಾಡು ಉಂಡೆಗಳ ಮೇಲೆ ದ್ರಾಕ್ಷಿ, ಗೋಡಂಬಿ, ಸಣ್ಣಗೆ ಹೆಚ್ಚಿದ ಕೊಬ್ಬರಿ ಚೂರು ಮತ್ತು ಲವಂಗ ಹಾಕಿದರೆ ಸಿಹಿಯೂ ಸವಿಯೂ ಆದ ಲಾಡು ರೆಡಿ.

ಮುಖಪುಟ /ಪಾಕಶಾಲೆ