ಮುಖಪುಟ /ಪಾಕಶಾಲೆ

ಖರ್ಜೂರದ ಸಿಹಿ ವಡೆ

ಬೇಕಾಗುವ ಪದಾರ್ಥ : 8-10 ಖರ್ಜೂರ, ಸಿಪ್ಪೆ ತೆಗೆದ ಬಾದಾಮಿ, 8 ಸ್ಪೂನ್ ಗೋ ಹಿಟ್ಟು, 10 ಚಮಚ ಸಕ್ಕರೆ, ಕಾಲು ಲೀಟರ್ ಹಾಲು;, ಕಾಲು ಚಮಚ ಏಲಕ್ಕಿಪುಡಿ, ಸ್ವಲ್ಪ ಕೇಸರಿ,

ತಯಾರಿಸುವ ವಿಧಾನ : ಮೊದಲು ಖರ್ಜೂರದ ಬೀಜ ತೆಗೆದು, ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ, ಅದನ್ನು ಅರ್ಧಗಂಟೆ ಕಾಲ ನೆನೆಸಿಡಿ. ಆನಂತರ ಬಾದಾಮಿ, ಏಲಕ್ಕಿಪುಡಿ, ಕೇಸರಿಯೊಂದಿಗೆ ಅರೆದು ಗೋಹಿಟ್ಟಿನ ಜೊತೆ ಕಲೆಸಿ. ಈ ಹಿಟ್ಟಿನ ಮಿಶ್ರಣದಿಂದ ವಡೆ ತಟ್ಟಿ, ಕಾದ ಎಣ್ಣೆ ಅಥವಾ ತುಪ್ಪದ ಬಾಣಲಿಯಲ್ಲಿ ಕರೆದು ತೆಗೆಯಿರಿ. ಆನಂತರ ಮೊದಲೇ ನೀರಿನಲ್ಲಿ ಸಕ್ಕರೆ ಕಲಕಿ, ಸ್ವಲ್ಪ ಬೆಚ್ಚಗೆ ಮಾಡಿ ಸಿದ್ಧಪಡಿಸಿಟ್ಟುಕೊಂಡ ಸಕ್ಕರೆಯ ಅಂಟು ಪಾಕದಲ್ಲಿ ಅದ್ದಿ ತೆಗೆದರೆ ಸಿಹಿ ಸಿಹಿ ಖರ್ಜೂರದ ವಡೆ ರೆಡಿ.

ಮುಖಪುಟ /ಪಾಕಶಾಲೆ