ಮುಖಪುಟ /ಪಾಕಶಾಲೆ

ಹುರಿಗಡಲೆ ಚಟ್ನಿ

ಬೇಕಾಗುವ ಪದಾರ್ಥ : ಒಂದು ಅರ್ಧ ಹೋಳು ತೆಂಗಿನಕಾಯಿ, ಒಂದು ಚೂರು ಬೆಲ್ಲ, ಗಜ್ಜುಗದ ಗಾತ್ರ ಹುಣಸೆಹಣ್ಣು, ಚೂರು ಶುಂಠಿ, ಹುರಿಗಡಲೆ ನೂರೈವತ್ತು ಗ್ರಾಂ, ಎರಡು ಮೂರು ಎಸಳು ಕೊತ್ತಂಬರಿಸೊಪ್ಪು, ನಾಲ್ಕಾರು ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು, ಒಗ್ಗರಣೆ ಪದಾರ್ಥ.

ತಯಾರಿಸುವ ವಿಧಾನ : ಹುರಿಗಡಲೆ, ಶುಂಠಿ, ತೆಂಗಿನ ತುರಿ, ಉಪ್ಪು, ಹುಣಸೆ ಬೆರೆಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ರುಬ್ಬಿ. ಒರಳು ಕಲ್ಲಿನಲ್ಲಿ ಕಸರತ್ತು ಮಾಡುವುದಾದರೂ ಅಡ್ಡಿ ಇಲ್ಲ.

ನುಣುಪಾಗಿ ಅಥವಾ ಕೊಂಚ ತರಿತರಿಯಾಗಿ ರುಬ್ಬಿದ ಚಟ್ನಿಗೆ ಸಾಸಿವೆ ಇಂಗಿನ ಒಗ್ಗರಣೆ ಸೇರಿಸಿದರೆ ಚಟ್ನಿ ಸಿದ್ಧ. ಚಪಾತಿ, ಇಡ್ಲಿ, ಪೂರಿ, ರೊಟ್ಟಿಯ ಜೊತೆ ಹುರಿಗಡಲೆ ಚಟ್ನಿಯ ರುಚಿಯ ಗಮ್ಮತ್ತೇ ಗಮ್ಮತ್ತು. ಇದಕ್ಕೆ ಜೀರಿಗೆ ಒಗ್ಗರಣೆ ಹಾಕಿದರೆ ಮತ್ತೂ ರುಚಿಯಾಗಿರುತ್ತದೆ.

ಮುಖಪುಟ /ಪಾಕಶಾಲೆ