ಮುಖಪುಟ /ಪಾಕಶಾಲೆ

ಬಾದೂಷಾ... ಎಂಬ ಸುಲಭ ಸಾಧಾರಣ ಸಿಹಿ

ಬಾದೂಷಾ ಸಾಧಾರಣ ಸಿಹಿಯಾದರೂ, ತಿನ್ನಲು ಬಲು ಸವಿ. ಬನ್ನಿ ನಾವೂ ಬಾದೂಷಾ ಮಾಡೋಣ. ಸಾಮಾನ್ಯವಾಗಿ ಮದುವೆ ಮುಂಜಿ ಮನೆಗಳಲ್ಲಿ ಮಾಡುವ ಸಿಹಿ ಲಾಡು. ಸುಲಭಕ್ಕೆ ಆಗುವ ಇದು ಸಾಧಾರಣ ಸ್ವೀಟ್ ಎಂದೇ ಖ್ಯಾತ. ಇದರ ನಂತರದ ಸ್ಥಾನ ಬಾದೂಷಾದ್ದು.

ಬಾದೂಷಾ ಸಾಧಾರಣ ಸಿಹಿಯಾದರೂ, ತಿನ್ನಲು ಬಲು ಸವಿ. ಬನ್ನಿ ನಾವೂ ಬಾದೂಷಾ ಮಾಡೋಣ.
ಬೇಕಾಗುವ ಪದಾರ್ಥ: ಅರ್ಧಕೆ.ಜಿ. ಮೈದಾಹಿಟ್ಟು, ಅರ್ಧ ಕೆ.ಜಿ. ಸಕ್ಕರೆ, ಸ್ವಲ್ಪ ತುಪ್ಪ, ಒಂದು ಸಣ್ಣ ಚಿಟಿಕೆಯಷ್ಟು ಅಡಿಗೆ ಸೋಡಾ, ಒಂದು ಲೋಟದಷ್ಟು ಗಟ್ಟಿ ಮೊಸರು.

ಮಾಡುವ ವಿಧಾನ : ಸಕ್ಕರೆ ಎಳೆ ಪಾಕವನ್ನು ಮೊದಲು ತಯಾರಿಸಿಟ್ಟುಕೊಳ್ಳಬೇಕು. ಮೈದಾ ಹಿಟ್ಟಿಗೆ ತುಪ್ಪ, ಮೊಸರು, ಅಡಿ ಸೋಡಾ ಬೆರೆಸಿ ಕಲಸಿ ಚೆನ್ನಾಗಿ ನಾದಿ ಇಟ್ಟುಕೊಳ್ಳಬೇಕು. ಕಲಸಿದ ಹಿಟ್ಟು ಚಪಾತಿ ಹಿಟ್ಟಿನಂತೆ ಇದ್ದರೆ ಒಳ್ಳೆಯದು. ಆನಂತರ ಕಲಸಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಬೇಕು.

ಅದನ್ನು ಚಪಾತಿ ಮಣೆಯ ಮೇಲೆ ತಟ್ಟಿ , ಎಣ್ಣೆಯಲ್ಲಿ ಕರೆದು, ಸಕ್ಕರೆಯ ಪಾಕದಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ನೆನೆಸಿಡಬೇಕು. ಆ ಬಳಿಕ ಪಾಕದಿಂದ ತೆಗೆದರೆ ಬೂದೂಷಾ ಸಿದ್ಧ.

ಮುಖಪುಟ /ಪಾಕಶಾಲೆ