ಮುಖಪುಟ /ಪಾಕಶಾಲೆ

ರ್ಮಾ ಗರಂ ಮಸಾಲೆ ವಡೆ ಅಥವಾ ಆಂಬೋಡೆ

ambode, masale vadaಬೇಕಾಗುವ ಪದಾರ್ಥ : ಅರ್ಧ ಕೇಜಿಯಷ್ಟು ಕಡಲೇಬೇಳೆ, ಏಳೆಂಟು ಒಣ ಮೆಣಸಿನಕಾಯಿ, ಒಂದು ಹೋಳು ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು ಒಂದು ಕಂತೆ, ನಾಲ್ಕಾರು ಎಸಳು ಕರಿಬೇವಿನ ಸೊಪ್ಪು, ಎಣ್ಣೆ, ಉಪ್ಪು ಮತ್ತು ಶುಂಠಿ ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ :ಮೊದಲು ಕಡಲೇಬೇಳೆಯನ್ನು ನೀರಿನಲ್ಲಿ ತೊಳೆದು ನೆನೆಹಾಕಿ. ಕಡಲೇಬೇಳೆ ಚೆನ್ನಾಗಿನೆಂದ ಬಳಿಕ ಒಣಮೆಣಸಿನಕಾಯಿ, ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ತರಿತರಿಯಾಗಿ ರುಬ್ಬಿ. ಅದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಹಸಿಶುಂಠಿಯನ್ನು ಸೇರಿಸಿ.

ಈ ಎಲ್ಲ ಮಸಾಲೆ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಟ್ಟು ಕೊಳ್ಳಿ, ಉಂಡೆಗಳನ್ನು ಅಂಗೈಮೇಲೆ ತಟ್ಟಿ ಕಾದ ಎಣ್ಣೆಯ ಬಾಣಲೆಯಲ್ಲಿ ಕರಿದರೆ ಬಿಸಿಬಿಸಿ, ರುಚಿರುಚಿ ಆಂಬೊಡೆ ರೆಡಿ. ಅಗತ್ಯವೆನಿಸಿದರೆ, ಸಣ್ಣಗೆ ಹೆಚ್ಚಿದ ಪುದೀನ ಸೊಪ್ಪು ಮತ್ತು ಈರುಳ್ಳಿಯನ್ನೂ ಕಡಲೇ ಹಿಟ್ಟಿನ ಮಿಶ್ರಣಕ್ಕೆ ಬೆರೆಸಬಹುದು.

ಮುಖಪುಟ /ಪಾಕಶಾಲೆ