ಮುಖಪುಟ /ಪಾಕಶಾಲೆ

ಅಲಸಂದೆ ವಡೆ

ಬೇಕಾಗುವ ಪದಾರ್ಥ: 2 ಲೋಟದಷ್ಟು ಅಲಸಂದೆ ಕಾಳು, ಒಂದು ಕಟ್ಟು ಸಬ್ಬಸಿಗೆ ಸೊಪ್ಪು, ಅರ್ಧ ಲೋಟ ಉದ್ದಿನಬೇಳೆ, ನಾಲ್ಕೈದು ಆಲೂಗೆಡ್ಡೆ, 1 ಕಟ್ಟಷ್ಟು ಕೊತ್ತಂಬರಿ ಸೊಪ್ಪು, 5-6 ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ವಡೆ ಕರಿಯಲು ಎಣ್ಣೆ.

ಮಾಡುವ ವಿಧಾನ : ಅಲಸಂದೆಕಾಳನ್ನೂ ಹಾಗೂ ಉದ್ದಿನಬೇಳೆಯನ್ನೂ ಮೊದಲು ಚೆನ್ನಾಗಿ ನೀರಿನಲ್ಲಿ ತೊಳೆದು ೩ ಗಂಟೆ ಕಾಲ ನೆನೆ ಹಾಕಬೇಕು. ಚೆನ್ನಾಗಿ ನೆಂದ ಬಳಿಕ ನುಣುಪಾಗಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಸಬ್ಬಸಿಗೆಸೊಪ್ಪು, ಕೊತ್ತಂಬರಿಸೊಪ್ಪು, ಮುರಿದ ಹಸಿ ಮೆಣಸಿನಕಾಯಿ ಹಾಗೂ ಉಪ್ಪು ಬೆರೆಸಿ ಕಲಸಬೇಕು.

ಆನಂತರ ಅಂಗೈಮೇಲೆ ಸ್ವಲ್ಪ ಸ್ವಲ್ಪವೇ ಹಿಟ್ಟು ಹಾಕಿಕೊಂಡು ತಟ್ಟಿ, ಕಾದ ಎಣ್ಣೆಯ ಬಾಣಲಿಯಲ್ಲಿ ಕರಿದರೆ ರುಚಿರುಚಿಯಾದ ಅಲಸಂದೆ ವಡೆ ರೆಡಿ.

ಮುಖಪುಟ /ಪಾಕಶಾಲೆ