ಮುಖಪುಟ /ಸುದ್ದಿ ಸಮಾಚಾರ

ಕಂಬಾರ್‌ಗೆ ಸಿ.ಎಂ. ಅಭಿನಂದನೆ

Dr. Chandrashekar Kambara and C.M. Sadanandagowdaಬೆಂಗಳೂರು, ಸೆ. ೨೦: ಪ್ರತಿ ನಿತ್ಯ ರಾಜಕೀಯದ, ಸಂಘರ್ಷದ ಸುದ್ದಿಗಳಿಂದ ಇಂದು ಎಲ್ಲ ಪತ್ರಿಕೆಗಳಿಗೂ ಮುಕ್ತಿ ಸಿಕ್ಕಿದೆ. ಜನ ಮೆಚ್ಚುವಂಥ ಸುದ್ದಿಯನ್ನು ಓದುವ ಅವಕಾಶವನ್ನು ಕಂಬಾರರು ನೀಡಿದ್ದಾರೆ. ಕನ್ನಡ ಸಾಹಿತ್ಯ ಸರಸ್ವತಿಯ ಮಕುಟಕ್ಕೆ ಮತ್ತೊಂದು ಜ್ಞಾನಪೀಠದ ಗರಿ ತೊಡಿಸಿದ ಚಂದ್ರಶೇಖರ ಕಂಬಾರರಿಗೆ ಅಭಿನಂದಿಸಿದರು. 

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಾರರು ಅರ್ಹತೆಯ ಆಧಾರದ ಮೇಲೆ ಸಾಹಿತ್ಯ ಲೋಕದ ಪರಮೋಚ್ಚ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ತಮ್ಮ ತವರು ಜಿಲ್ಲೆ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಕೂಡ ಸೇವೆ ಸಲ್ಲಿಸಿದ್ದು, ತಮಗೆ ಇನ್ನೂ ಹೆಚ್ಚಿನ ಸಂತಸವಾಗಿದೆ ಎಂದರು. 

ಸಮಾಜದ ಅಂಕುಡೊಂಕುಗಳನ್ನು ತಿದ್ದುವಂಥ ಅಮೂಲ್ಯ ಸಾಹಿತ್ಯ ರಚಿಸಲು ದೇವರು ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಅವರು, ಸಮಾಜ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಬುದ್ಧಿಜೀವಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು. 

ಇದಕ್ಕೂ ಮುನ್ನ ಇಂದು ಕತ್ತರಿಗುಪ್ಪೆಯಲ್ಲಿರುವ ಕಂಬಾರರ ನಿವಾಸ ಸಿರಿಸಂಪಿಗೆಗೆ ತೆರಳಿದ ಮುಖ್ಯಮಂತ್ರಿ ಶಾಲು ಹೊದಿಸಿ ಚಂದ್ರಶೇಖರ ಕಂಬಾರರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾನೂನು ಹಾಗೂ ಸಂಸದೀಯ ಸಚಿವ ಸುರೇಶ್ ಕುಮಾರ್ ಹಾಜರಿದ್ದರು. 

ಮುಖಪುಟ /ಸುದ್ದಿ ಸಮಾಚಾರ