ಮುಖಪುಟ /ಸುದ್ದಿ ಸಮಾಚಾರ

ಪ್ರಾಥಮಿಕ, ಪ್ರೌಢ ಶಿಕ್ಷಣ ಕನ್ನಡದಲ್ಲೇ ಆಗಬೇಕು - ಕಂಬಾರ

kambaraಬೆಂಗಳೂರು, ಸೆ. ೨೦: ರಾಜ್ಯದಲ್ಲಿ ಒಂದರಿಂದ ೧೦ನೇ ಇಯತ್ತೆವರೆಗಿನ ಶಿಕ್ಷಣ ಕನ್ನಡದಲ್ಲೇ ಆಗಬೇಕು. ಈ ಶಿಕ್ಷಣವನ್ನು ಸರ್ಕಾರವೇ ನೀಡಬೇಕು ಎಂದು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡರತ್ನ.ಕಾಂನೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆ ಹಾಗೂ ಕಾನ್ವೆಂಟ್ ಶಾಲೆ ಎಂಬ ತಾರತಮ್ಯ ಸರಿಯಲ್ಲ. ಬಡವರ ಮಕ್ಕಳು ನರಳುತ್ತಾ ಸರ್ಕಾರಿ ಶಾಲೆಯಲ್ಲಿ ಕಲಿಯುವುದು, ಶ್ರೀಮಂತರ ಮಕ್ಕಳು ಗರ್ವದಿಂದ ಕಾನ್ವೆಂಟ್ ಶಾಲೆಯಲ್ಲಿ ಕಲಿಯುವುದು ಎಷ್ಟು ಸರಿ. ಮಕ್ಕಳಿಗೆ ಆ ವಯಸ್ಸಿನಲ್ಲಿ ತಾರತಮ್ಯ ತೋರುವುದು ಸರಿಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ನಾಡಿನ ಜನರು ಗಂಭೀರವಾಗಿ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರ ೧೦ನೇ ತರಗತಿಯವರೆಗಿನ ಮಕ್ಕಳಿಗೆ ಕನ್ನಡದಲ್ಲಿಯೇ ಶಿಕ್ಷಣ ನೀಡಬೇಕು. ಈ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವುದನ್ನು ಬಿಟ್ಟು ಸರ್ಕಾರವೇ ಮಾಡಬೇಕು. ಪಿಯುಸಿ ನಂತರ ಯಾವುದೇ ಭಾಷೆಯಲ್ಲಿ ಶಿಕ್ಷಣ ನೀಡಲಿ, ಖಾಸಗಿಯವರಿಗೂ ಅವಕಾಶ ನೀಡಲಿ ಎಂದು ಸಲಹೆ ಮಾಡಿದರು.

 

ಮುಖಪುಟ /ಸುದ್ದಿ ಸಮಾಚಾರ