ಮುಖಪುಟ /ಸುದ್ದಿ ಸಮಾಚಾರ

ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠದ ಗರಿ
ಕನ್ನಡ ಸಾರಸ್ವತ ಶಾರದೆಗೆ 8ನೇ ಕಿರೀಟ

Dr. Chandrashekara kambara, ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿಬೆಂಗಳೂರು, ಸೆ.೧೯:  ಕನ್ನಡದ ಹಿರಿಯ ಸಾಹಿತಿ, ನಾಟಕಕಾರ ಚಂದ್ರಶೇಖರ್ ಕಂಬಾರ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸಿಯ ಗರಿ. ಬಹುಭಾಷೀಚಿiರ ಹಿಂದಿಗಿಂತ ಮಿಗಿಲಾಗಿ ೭ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕನ್ನಡಕ್ಕೀಗ ಮತ್ತೊಂದು ಹೆವ್ಮ್ಮೆಯ ಗರಿಯನ್ನು ಕಂಬಾರರು ತೊಡಿಸಿದ್ದಾರೆ.

೧೯೩೭ರ ಜನವರಿ ೨ರಂದು ಬೆಳಗಾವಿ ಜಿಲ್ಲೆ ಘೋಡಗೇರಿಯಲ್ಲಿ ಜನಿಸಿದ ಚಂದ್ರಶೇಖರ ಕಂಬಾರ್ ಅವರು ಜಾನಪದ ಹಾಗೂ ದೇಶಿ ಸೊಗಡಿನ ಸಾಹಿತ್ಯ ರಚನೆಯಿಂದ ಮನೆಮಾತಾಗಿದ್ದಾರೆ.

ನಾಟಕಕಾರರಾಗಿ, ಲೇಖಕರಾಗಿ, ಕವಿಯಾಗಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವ ಕಂಬಾರರು ಸಂಗೀತ ನಿರ್ದೇಶಕರಾಗಿ, ಚಲನಚಿತ್ರ ನಿರ್ದೇಶಕರಾಗಿ, ಅಧ್ಯಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ  ಮೊಟ್ಟ ಮೊದಲ ಕುಲಪತಿಗಳಾಗಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಂಬಾರರ ಕರಿಮಾಯಿ, ಸಂಗೀತಾ, ಕಾಡುಕುದುರೆ ಚಲನಚಿತ್ರಗಳಾಗಿವೆ. ಸಿಂಗಾರೆವ್ವ ಮತ್ತು ಅರಮನೆ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಹರಕೆಯ ಕುರಿ, ಬೋಳೆ ಶಂಕರ ಮೊದಲಾದವು ಇವರ ಪ್ರಮುಖ ಕೃತಿಗಳು.

೨ ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ ಹಾಗೂ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಪಡೆದ ಕನ್ನಡದ ಸಾರಸ್ವತ ಸರಸ್ವತಿಯ ಭಂಡಾರ ಎಷ್ಟು ಶ್ರೀಮಂತ ಎಂಬುದನ್ನು ಕನ್ನಡ ಮತ್ತೊಮ್ಮೆ ಸಾಬೀತು ಪಡಿಸಿದೆ.

ಕಂಬಾರರ ಸಮಗ್ರ ಸಾಹಿತ್ಯವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಹಿಂದೆ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅವರಿಗೆ ಈ ಗೌರವ ಲಭಿಸಿತ್ತು. 

ಜ್ಙಾನಪೀಠ ಖಾಸಗಿ ಪ್ರಶಸ್ತಿ: ಸಾಹಿತ್ಯ ಲೋಕದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಯಾವುದೇ ಸರ್ಕಾರ ಅಥವಾ ಅಕಾಡಮಿ ನೀಡುವುದಲ್ಲ. ಇದು ಅತ್ಯುನ್ನತ ಖಾಸಗಿ ಪ್ರಶಸ್ತಿ. 

ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರತಿಷ್ಠಾನ ಸಮಿತಿಯೊಂದನ್ಹು ರಚಿಸಿ ಪ್ರತಿವರ್ಷ ಭಾರತೀಯ ಭಾಷೆಯ ಸಾಧಕರನ್ನು ಗುರುತಿಸಿ ಈ ಗೌರವ ನೀಡುತ್ತದೆ. 

ಜ್ಞಾನಪೀಠ ಪ್ರಶಸ್ತಿ ಪ್ರತಿಷ್ಠಾನ ಸ್ಥಾಪನೆ ಆದದ್ದು ೧೯೬೫ರಲ್ಲಿ. ರಮಾಜೈನ್ ಮತ್ತು ಸಾಹು ಶಾಂತಿ ಪ್ರಸಾದ್ ಜೈನ್ ದಂಪತಿ ಈ ಪ್ರಶಸ್ತಿ ಹುಟ್ಟು ಹಾಕಿದರು.  

ಈ ಪ್ರಶಸ್ತಿಯನ್ನು ಭಾರತೀಯ ಭಾಷೆಯ ಹಾಗೂ ಭಾರತೀಯ ಕವಿ, ಲೇಖಕರಿಗೆ ಮಾತ್ರವೇ ನೀಡಲಾಗುತ್ತದೆ. ಒಂದು ಬಾರಿ ಪ್ರಶಸ್ತಿ ಪಡೆದ ಭಾಷೆಯನ್ನು ಮುಂದಿನ ೩ ವರ್ಷಗಳ ಕಾಲ ಈ ಪ್ರಶಸ್ತಿಗೆ ಪರಿಗಣಿಸುವುದಿಲ್ಲ. 

ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದಿಲ್ಲ. ಒಮ್ಮೆ ಪ್ರಶಸ್ತಿ ಪಡೆದ ಕವಿಗೆ ಮತ್ತೊಮ್ಮೆ ಈ ಪ್ರಶಸ್ತಿ ನೀಡಲಾಗುವುದಿಲ್ಲ. ಈ ಪ್ರಶಸ್ತಿ ವಾಗ್ದೇವಿಯ ಪ್ರತಿಮೆ ಹಾಗೂ ೫ ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

 

ಮುಖಪುಟ /ಸುದ್ದಿ ಸಮಾಚಾರ