ಮುಖಪುಟ /ಸುದ್ದಿ ಸಮಾಚಾರ   
 

ಎಸ್. ಪ್ರಹ್ಲಾದ್ ಚಿತ್ರ ಪ್ರದರ್ಶನಕ್ಕೆ ಚಾಲನೆ

ಚಿತ್ರ ಪ್ರದರ್ಶನಬೆಂಗಳೂರು, ಸೆ.3: ಎಸ್. ಪ್ರಹ್ಲಾದ್ ಅವರ ತೈಲ ವರ್ಣ ಚಿತ್ರಗಳ ರಿಯಲಿಸಂ ಚಿತ್ರ ಪ್ರದರ್ಶನ ಬೆಂಗಳೂರಿನಲ್ಲಿ ಆರಂಭಗೊಂಡಿದೆ.

ಎಂ.ಜಿ. ರಸ್ತೆಯ ಪ್ರತಿಮಾ ಆರ್ಟ್ ಗ್ಯಾಲರಿಯಲ್ಲಿ 8ನೇ ತಾರೀಖಿನವರೆಗೆ ನಡೆಯಲಿರುವ ಈ ಪ್ರದರ್ಶನ ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ.

ಈ ಪ್ರದರ್ಶನವನ್ನು ಮಾಜಿ ಸಚಿವೆ ರಾಣಿ ಸತೀಶ್ ಉದ್ಘಾಟಿಸಿದರು. ಬೆಂಗಳೂರು ದೂರದರ್ಶನದ ಉಪ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

 

 ಮುಖಪುಟ /ಸುದ್ದಿ ಸಮಾಚಾರ