ಮುಖಪುಟ /ಸುದ್ದಿ ಸಮಾಚಾರ   
 

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.೧೦ರಷ್ಟು ಏರಿಕೆ

ನವದೆಹಲಿ, ಸೆ.೧೬ - ಹಬ್ಬಗಳ ಸಾಲು ಆರಂಭಕ್ಕೆ ಮುನ್ನವೇ ಕೇಂದ್ರ ಸರ್ಕಾರ ಶೇ.೧೦ರಷ್ಟು ತುಟ್ಟಿಭತ್ಯೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ದೆಹಲಿಯಲ್ಲಿಂದು ನಡೆದ ಸಚಿವ ಸಂಪುಟ ಸಭೆ ಈ ಏರಿಕೆಗೆ ತನ್ನ ಅನುಮೋದನೆ ನೀಡಿತು. ಇದರೊಂದಿಗೆ ತುಟ್ಟಿಭತ್ಯೆ ಶೇ.೪೫ಕ್ಕೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರದ ೮೮ ಲಕ್ಷ ನೌಕರರು ಹಾಗೂ ಪಿಂಚಣಿದಾರರಿಗೆ ಇದರಿಂದ ಲಾಭವಾಗಲಿದ್ದು, ಬೊಕ್ಕಸಕ್ಕೆ ೯,೩೦೩ ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.

೨೦೧೦ರ ಜುಲೈ ೧ರಿಂದ ಪೂರ್ವಾನ್ವಯವಾಗಿ ಹೊಸ ತುಟ್ಟಿಭತ್ಯೆ ಜಾರಿಗೆ ಬರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದರಿಂದ ೬,೨೦೨ ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೊಕ್ಕಸಕ್ಕೆ ತಗುಲಲಿದೆ.

 

 ಮುಖಪುಟ /ಸುದ್ದಿ ಸಮಾಚಾರ