ಮುಖಪುಟ /ಸುದ್ದಿ ಸಮಾಚಾರ   
 

ಸಿದ್ಧರಾಮಯ್ಯ ಮನವಿ ತಿರಸ್ಕೃತ

 siddaramaiahಬೆಂಗಳೂರು ಅ ೧೪:  ಶಾಸಕರ  ಅನರ್ಹತೆ ಪ್ರಕರಣ ನ್ಯಾಯಾಲಯದ ಮೆಟ್ಟಲು ಏರಿರುವುದರಿಂದ  ಬಹುಮತ ಸಾಬೀತುಪಡಿಸುವ ನಿರ್ಣಯವನ್ನು ಮುಂದೂಡಬೇಕೆಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸಭಾಧ್ಯಕ್ಷರಿಗೆ ಮನವಿ ಮಾಡಿದರು. 

ಕಲಾಪ ಆರಂಭವಾಗುತ್ತಿದ್ದಂತೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು ಕಳೆದ ಸೋಮವಾರ ನಡೆದ ಘಟನೆಗೆ ವಿಷಾಧ ಸೂಚಿಸಿ, ನಾವು ಕಲಾಪದಲ್ಲಿ ಭಾಗವಹಿಸಿ, ಮತದಾನ ವಿವರಣೆ ಕೇಳುಲು ತೀರ್ಮಾನಿಸಿದ್ದೇವು ಆದರೆ ಭದ್ರತಾ ಹೆಸರಿನಲ್ಲಿ ಪೊಲೀಸ್ ಅಧಿಕಾರಿಗಳು ಮಾಡಿದ ದುಂಡಾವರ್ತನೆ ಗಲಾಟೆಗೆ ಕಾರಣವಾಯಿತು ಎಂದು ತಿಳಿಸಿದರು. 

ಪೊಲೀಸ್ ಸಮವಸ್ತ್ರ ಧರಿಸಿ ಶಸ್ತ್ರಾಸ್ತ್ರಗಳೊಂದಿಗೆ ವಿಧಾನ ಸಭೆಯ ಸಭಾಂಗಣ ಪ್ರವೇಶ ಮಾಡಿದ್ದು, ಅಲ್ಲದೆ ಕಲಾಪ ನಡೆಯುವ ಪ್ರದೇಶದಲ್ಲಿಯು ಒಳನುಗ್ಗಿರುವುದು ಕರ್ನಾಟಕ ಇತಿಹಾಸದಲ್ಲಿಯೇ ಇದು ಮೊದಲನೆಯ ತಪ್ಪು ಘಟನೆ. 

ಕರ್ನಾಟಕದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಎಲ್ಲಾ ರೀತಿಯ ವಾಸ್ತುಗಳನ್ನು ನೋಡಿ ವಿಧಾನ ಸೌಧವನ್ನು ನಿರ್ಮಾಣ ಮಾಡಿದ್ದರೂ ಆದರೆ ಪೊಲೀಸ್ ಅಧಿಕಾರಿಗಳ ವರ್ತನೆಯೇ ಈ ಘಟನೆಗೆ ಸಾಕ್ಷಿಯಾಯಿತು.  

ಮುಖ್ಯಮಂತ್ರಿಯವುರು ಸಹ ವಿಶ್ವಾಸಮತ ಮಂಡನೆಯ ಮೊದಲೇ ಸಭಾಧ್ಯಕ್ಷರೇ ಎಲ್ಲಾ ನಿರ್ಣಯವನ್ನು ಮಂಡಿಸಿದರು. ಧ್ವನಿ ಮತದಿಂದ ಅಂಗೀಕಾರವಾಯಿತು ಎಂದು ಪ್ರಕಟಿಸಿ ಹೊರ ನಡೆದರು.

ಅಂದಿನ ಘಟನೆಗೆ ನಾವು ಹೊಣೆಗಾರರಲ್ಲ. ಹನ್ನೊಂದು ಜನ ಬಿಜೆಪಿ ಹಾಗೂ ಐವರು ಪಕ್ಷೇತರ ಶಾಸಕರ ಅನರ್ಹಗೊಳಿಸಿದ್ದೀರಿ. ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಸೋಮವಾರ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಇಂದು ಕೈಗೊಂಡಿರುವ ಬಹುಮತ ಸಾಬೀತು ಕಲಾಪವನ್ನು ಮುಂದೂಡಬೇಕೆಂದು ಅವರು ಮನವಿ ಮಾಡಿಕೊಂಡರು. 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನವಿಯನ್ನು ಸಭಾಧ್ಯಕ್ಷರು ತಳ್ಳಿ ಹಾಕಿ ಬಹುಮತ ಸಾಬೀತು ನಿರ್ಣಯವನ್ನು ಮಂಡನೆ ಮಾಡುವಂತೆ ಸಭಾನಾಯಕರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದರು. 

ಬಹುಮತ ನಿರ್ಣಯಕ್ಕೆ ಮೊದಲು ಧ್ವನಿಮತದಿಂದ ನಂತರ ಶಾಸಕರ ತಲೆ ಎಣಿಕೆ ಮಾಡಿ ಸರ್ಕಾರದ ಪರವಾಗಿ ೧೦೬ ಹಾಗೂ ವಿರೋಧವಾಗಿ ೧೦೦ ಮತಗಳು ಬಂದವು ಎಂದು ಪ್ರಕಟಿಸಿದರು. ಕಲಾಪವನ್ನು ಸಭಾಧ್ಯಕ್ಷರು ಅನಿರ್ಧಿಷ್ಟ ಅವಧಿಗೆ ಮುಂದೂಡಿದರು.

 ಮುಖಪುಟ /ಸುದ್ದಿ ಸಮಾಚಾರ