ಮುಖಪುಟ /ಸುದ್ದಿ ಸಮಾಚಾರ   
 

ದಾಳಿಯಲ್ಲಿ ಕಾಂಗ್ರೆಸ್ ಕೈವಾಡ ಇಲ್ಲ - ಸಿದ್ದು, ಡಿಕೆಶಿ

siddaramaiahಬೆಂಗಳೂರು, ಅ.೨೫- ಸಚಿವರು, ಶಾಸಕರು ಸೇರಿದಂತೆ ಬಿಜೆಪಿಗೆ ಸೇರಿದ ಹಲವರ ಮನೆ ಹಾಗೂ ಕಚೇರಿಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿಯ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮಾತನಾಡಿ, ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ದಿಷ್ಟ ಮಾಹಿತಿ ಸಿಕ್ಕರೆ, ಅದರ ಆಧಾರದ ಮೇಲೆ ಅವರು ದಾಳಿ ನಡೆಸಿದ್ದಾರೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಇವರು ಪ್ರಾಮಾಣಿಕರಾಗಿದ್ದರೆ ಯಾರಿಗೆ ಏಕೆ ಹೆದರಬೇಕು. ಯಾವ ದಾಳಿ ನಡೆದರೆ ಏನಂತೆ ಎಂದು ಪ್ರಶ್ನಿಸಿದರು.

ಇಂದು ತಮ್ಮ ಮನೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಕಳ್ಳತನ ಮಾಡಿದ್ದಾರೆ. ಹೀಗಾಗಿ ಅವರ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ ಇದಕ್ಕೂ ಕಾಂಗ್ರೆಸ್‌ಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಇವರು ಪ್ರಾಮಾಣಿಕರಾಗಿದ್ದರೆ ಏಕೆ ಹೆದರಬೇಕು. ಯಾವ ದಾಳಿ ನಡೆದರೂ ಏನೂ ಆಗುವುದಿಲ್ಲ ಎಂದರು. ಇವರು ಮಾಡುವ ಅನ್ಯಾಯಗಳಿಗೆಲ್ಲಾ ನಮ್ಮನ್ನು ಹೊಣೆ ಮಾಡಿ ಮಾಡಿದ ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಾರೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ಆದಾಯ ತೆರಿಗೆ ದಾಳಿಗೆ ಹೈಕಮಾಂಡ್ ಹೊಣೆ ಅಲ್ಲ. ಇದರಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ. ಬಿಜೆಪಿಯವರು ಸುಮ್ಮನೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ತಮ್ಮ ಕಚೇರಿಯ ಮೇಲೂ ದಾಳಿ ನಡೆದಿತ್ತು ಎಂದು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ