ಮುಖಪುಟ /ಸುದ್ದಿ ಸಮಾಚಾರ   
 

ಸ್ವಾಭಿಮಾನಕ್ಕಾಗಿ ಬಂಡಾಯ-ರೇಣುಕಾಚಾರ್ಯ

Renukacharyaಕನ್ನಡರತ್ನವಾರ್ತೆ, ಬೆಂಗಳೂರು, ಅ.೬ : ಯಾವುದೇ ಸ್ವಾರ್ಥಕ್ಕಾಗಿ ನಾವು ಈ ಬಂಡಾಯದ ಬಾವುಟ ಹಾರಿಸಿಲ್ಲ. ನಮಗೆ ಪಕ್ಷದಲ್ಲಿ ನೋವಾಗಿದೆ. ಮುಖ್ಯಮಂತ್ರಿಗಳು ಶಾಸಕರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಅವರು, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಬಂಡಾಯ ಅನಿವಾರ್ಯವಾಯಿತು ಎಂದು ಬಂಡಾಯ ಗುಂಪಿನ ನಾಯಕ ರೇಣುಕಾಚಾರ್ಯ ಹೇಳಿದ್ದಾರೆ.

ಚನ್ನೈನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾವುಗಳಾರೂ ವಿಶ್ವಾಸಕ್ಕೂ ಜೊತೆಯಲ್ಲಿ ಸೇರಬಾರದು ಎಂದು ಪ್ರತಿಬಂಧಿಸಲಾಗುತ್ತಿತ್ತು, ನಮ್ಮ ವ್ಯಕ್ತಿ ಸ್ವಾತಂತ್ರ್ಯಕ್ಕೂ ದಕ್ಕೆ ತರಲಾಗಿತ್ತು ಎಂದರು.  ಕರ್ನಾಟಕದ ಜನತೆಯ ಕ್ಷಮೆ ಕೋರುವುದಾಗಿ ಹೇಳಿದ ಅವರು, ನಮ್ಮ ಸ್ವಾಭಿಮಾನ ರಕ್ಷಣೆಗಾಗಿ ಬೆಂಬಲ ವಾಪಸು ಪಡೆಯಲೇಬೇಕಾಯಿತು ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರೇ ಪಕ್ಷೇತರ ಶಾಸಕರು ಅವರನ್ನು ಸಂಪುಟದಿಂದ ಕೈಬಿಡಬೇಡಿ ಎಂದು ಮನವಿ ಮಾಡದರೂ ಮುಖ್ಯಮಂತ್ರಿ ಕೇಳಲಿಲ್ಲ. ನೀವು ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎನ್ನುವಂತೆ ಈಶ್ವರಪ್ಪ ಮಾತನಾಡಿದರು ಇದು ತಮಗೆಲ್ಲರಿಗೂ ನೋವು ತಂದಿದೆ ಎಂದರು.

ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಶಿವನಗೌಡ ನಾಯಕ್, ಗೂಳಿಹಟ್ಟಿ ಶೇಖರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಬಂಡಾಯಕ್ಕೆ ಕಾರಣವಾಯಿತು ಎಂದು ಹೇಳಿದರು. ನಮಗೆ ಯಾವುದೇ ಪಕ್ಷದ ನಾಯಕರು ಹಣದ ಆಮಿಷ ಒಡ್ಡಿಲ್ಲ. ಮುಖ್ಯಮಂತ್ರಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

 ಮುಖಪುಟ /ಸುದ್ದಿ ಸಮಾಚಾರ