ಮುಖಪುಟ /ಸುದ್ದಿ ಸಮಾಚಾರ   
 

ಕೊಚ್ಚಿಗೆ ಭಿನ್ನಮತೀಯರು

narendraswamyಕನ್ನಡರತ್ನವಾರ್ತೆ, ಬೆಂಗಳೂರು, ಅ.೬ : ನಿನ್ನೆ ಬೆಳಗ್ಗೆ ಕರ್ನಾಟಕ ತಮಿಳುನಾಡಿನ ಗಡಿಯ ಹೊಸೂರಿನಲ್ಲಿ ನಂತರ ಚೆನ್ನೈನಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಬಂಡಾಯ ಸಚಿವ, ಶಾಸಕರು ಇಂದು ಕೊಚ್ಚಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಈ ವಿಷಯವನ್ನು ಬೆಂಗಳೂರಿಗೆ ಆಗಮಿಸಿದ್ದ ಭಿನ್ನಮತೀಯ ತಂಡದ ಸಚಿವ ನರೇಂದ್ರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರ ಸ್ವಾಮಿ, ರಾಜ್ಯದ ಹಿತದೃಷ್ಟಿಯಿಂದ ತಾವು ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದರು.

ನಮ್ಮ ನಿರ್ಧಾರ ಅಛಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅಧಿಕಾರ ಇದೆ ಎಂದು ದುರಹಂಕಾರದಿಂದ ಮೆರೆದವರು ನೀರು ಕುಡಿಯುತ್ತಾರೆ. ನಾವು ನಮ್ಮ ಶಕ್ತಿ ತೋರಿಸುತ್ತೇವೆ. ನಾವು ಯಾರ, ಯಾವುದೇ ಆಮಿಷಕ್ಕೆ ಬಲಿಯಾವುದಿಲ್ಲ ಎಂದರು.

ನಾವು ಯಾರಿಗೂ ಬಗ್ಗಲ್ಲ. ಅವರ ಒತ್ತಡ ನಮಗೆ ಏನೂ ಮಾಡುವುದಿಲ್ಲ ಎಂದರು. ನಾವು ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದುಬಂದೆವು. ಬಿಜೆಪಿ ಸೇರಿ, ಇಷ್ಟು ದಿನ ಉಸಿರುಕಟ್ಟುವ ವಾತಾವರಣದಲ್ಲಿದ್ದೆವು. ಈಗ ನಾವು ಮತ್ತೆ ಸರ್ವತಂತ್ರ ಸ್ವತಂತ್ರರಾಗಿದ್ದೇವೆ ಎಂದು ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ