ಮುಖಪುಟ /ಸುದ್ದಿ ಸಮಾಚಾರ   
 

೧ರಂದು ಬಹುಮತ ಸಾಬೀತು - ಯಡ್ಡಿ

Yadiyurappaಕನ್ನಡರತ್ನವಾರ್ತೆ, ಬೆಂಗಳೂರು, ಅ.೬ : ರಾಜ್ಯಪಾಲರು ಅಕ್ಟೋಬರ್ ೧೨ರೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದೆ. ಅವರ ಸೂಚನೆಯನ್ನು ಅಂಗೀಕರಿಸಿದ್ದು, ಈ ತಿಂಗಳ ೧೧ರಂದು ಬೆಳಗ್ಗೆ ೧೦ ಗಂಟೆಗೆ ವಿಧಾನಸಭೆಯ ಅಧಿವೇಶನ ಕರೆಯಲಾಗಿದೆ. ೧೧ರಂದೇ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ನಮ್ಮ ಎಲ್ಲ ಶಾಸಕರು ಒಂದೆರೆಡು ದಿನಗಳಲ್ಲೇ ವಾಪಸು ಬರುತ್ತಾರೆ. ನಾವು ಬಹುಮತ ಪಡೆದೇ ತೀರುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದರು.

ಮಾಜಿ ಪ್ರಧಾನಿ ದೇವೇಗೌಡ ಅವರ ಕುಟಂಬದವರು ತಮ್ಮ ಸರ್ಕಾರವನ್ನು ಉರುಳಿಸಲು ಕುತಂತ್ರ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹರಿಹಾಯ್ದರು.

ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಅಧಿಕಾರ ಸಿಗುವುದಿಲ್ಲ ಎಂದು ಅರಿತಿರುವ ಇವರುಗಳು ಕುತಂತ್ರ ನಡೆಸಿ ಹಿಂಬಾಗಿಲಿನ ಮೂಲಕ  ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.

ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದವರು ಬೆಂಗಳೂರು ಸುತ್ತ ಮುತ್ತ ಸುಮಾರು ಐದು ಸಾವಿರಕ್ಕೂ ಹೆಚ್ಚು ಎಕರೆ ಬೆಲೆಬಾಳುವ ಜಮೀನನ್ನ ಬೇನಾಮಿ ಹೆಸರಿನಲ್ಲಿ ಹೊಂದಿದ್ದಾರೆ.  ಈ ಆಸ್ತಿಯನ್ನ ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿದರು.

ಜೆಡಿಎಸ್‌ನವರು ರಾಜ್ಯದ ಅಭಿವೃದ್ಧಿಯನ್ನು ಸಹಿಸದೆ ಸರ್ಕಾರ ಉರುಳಿಸುವ ಕೆಲಸ ನಡೆಸಿದ್ದಾರೆ ಎಂದು ದೂರಿದರು.

 ಮುಖಪುಟ /ಸುದ್ದಿ ಸಮಾಚಾರ