ಮುಖಪುಟ /ಸುದ್ದಿ ಸಮಾಚಾರ   
 

೧೬ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ

ಶಿವಮೊಗ್ಗ ಅ. ೨೩ :ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ನವೆಂಬರ್ ೨೨ ರಿಂದ ೨೪ರವರೆಗೆ ೧೬ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶವನ್ನು ಆಯೋಜಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಎನ್‌ಸಿಎಸ್‌ಟಿಸಿ ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಸರ್ಕಾರ ಕ.ರಾ.ವಿ.ಪ.ಬೆಂಗಳೂರು, ಪ್ರಾದೇಶಿಕ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಿಜ್ಞಾನ ಸಮಿತಿ, ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.   

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ೧೦೦೦ ಬಾಲ ವಿಜ್ಞಾನಿಗಳು ಸಮಾವೇಶದಲ್ಲಿ ತಮ್ಮ ಪುಟ್ಟ ಸಂಶೋಧನಾ ಯೋಜನಾ ವರದಿಗಳನ್ನು ಮಂಡಿಸಲಿದ್ದಾರೆ. ಸಮಾವೇಶದ ಪ್ರಧಾನ ವಿಷಯ ಇರುವುದೊಂದೇ ಭೂಮಿ ಅದುವೇ ನಮ್ಮೆಲ್ಲರ ಮನೆ - ಸಂಶೋಧಿಸಿ, ಸಂರಕ್ಷಿಸಿ, ಪೋಷಿಸಿ ಎಂಬುದಾಗಿದೆ.

ಈ ಸಮಾವೇಶದಲ್ಲಿ ವಸುಂಧರೆ ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಲು ಉದ್ದೇಶಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ನೆರವನ್ನು ಕೋರಲಾಗಿದೆ.

ಮುಖಪುಟ /ಸುದ್ದಿ ಸಮಾಚಾರ