ಮುಖಪುಟ /ಸುದ್ದಿ ಸಮಾಚಾರ   
 

ಕೊಡಗು ಸೈನಿಕ ಶಾಲೆ : ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ

ಚಾಮರಾಜನಗರ ಅ. ೨೩ :   ಕೊಡಗು ಸೈನಿಕ ಶಾಲೆಯು ೨೦೦೯-೧೦ನೇ ಸಾಲಿಗೆ ೬ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ೨ನೇ ಜುಲೈ ೧೯೯೮ ರಿಂದ ೧ನೇ ಜುಲೈ ೧೯೯೯ರ ಒಳಗೆ ಜನಿಸಿರುವ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವರು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರವೇಶ ಪರೀಕ್ಷೆಯು ೪.೧.೨೦೦೯ರಂದು ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ಹಾಗೂ ಕುಶಾಲನಗರಗಳಲ್ಲಿ ನಡೆಯುವುದು. ಅರ್ಜಿ ಹಾಗೂ ೨ ವರ್ಷದ ಹಿಂದಿನ ಪ್ರಶ್ನೆ ಪತ್ರಿಕೆಗಳು ಹಾಗೂ ವಿವರ ಪತ್ರಗಳನ್ನು ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು, ಕೂಡಿಗೆ ಅಂಚೆ, ಕೊಡಗು ಜಿಲ್ಲೆ, ಕರ್ನಾಟಕ - ೫೭೧೨೩೨ ಇವರಿಂದ ಪಡೆಯಬಹುದಾಗಿದೆ.

ಸಾಮಾನ್ಯ ರಕ್ಷಣಾ ವಿಭಾಗದವರು ರೂ.೩೫೦ ಹಾಗೂ ಎಸ್‌ಸಿ ಮತ್ತು ಎಸ್‌ಟಿ ವಿಭಾಗದವರು ರೂ.೨೫೦ರ ಡಿಡಿ.ಯನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕುಶಾಲನಗರ ಶಾಖೆ (ಕರ್ನಾಟಕ) ಇಲ್ಲಿಗೆ ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು ಹೆಸರಿಗೆ ಪಡೆದು ೯ x ಅಳತೆ ಸ್ವವಿಳಾಸ ಹೊಂದಿರುವ ರೂ.೨೫ ಮೌಲ್ಯದ ಸ್ಟ್ಯಾಂಪ್ ಅಂಟಿಸಿ ಕವರಿನೊಂದಿಗೆ ಕಳುಹಿಸಬೇಕು. ಅರ್ಜಿ ಮತ್ತು ವಿವರ ಪತ್ರಗಳು ಸದರಿ ಕಚೇರಿಯಲ್ಲಿ ಲಭ್ಯವಿರುತ್ತದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ೨೦೦೮ರ ಡಿಸೆಂಬರ್ ೧೦ ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು ಅಥವಾ ದೂರವಾಣಿ ಸಂಖ್ಯೆ ೦೮೨೭೬ - ೨೭೮೯೬೧ನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

ಮುಖಪುಟ /ಸುದ್ದಿ ಸಮಾಚಾರ