ಮುಖಪುಟ /ಸುದ್ದಿ ಸಮಾಚಾರ   
 

ದೀಪಾವಳಿಯಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯ
ಆಟಂಬಾಂಬ್ ಇತ್ಯಾದಿ ಢಂ ಢಂ ಪಟಾಕಿ ಬಳಕೆ ತಡೆಗೆ ಮನವಿ

ಶಿವಮೊಗ್ಗ ಅ. ೨೩ : ಬೆಳಕಿನ ಹಬ್ಬ ದೀಪಾವಳಿಯನ್ನು ದೀಪಗಳನ್ನು ಬೆಳಗಿಸುವುದರ ಮೂಲಕ ಆಚರಿಸುವುದರಿಂದ ಶಬ್ದ ಮತ್ತು ವಾಯುಮಾಲಿನ್ಯ ನಿಯಂತ್ರಿಸಬಹುದು.. ದೀಪಾವಳಿ ಹಬ್ಬದ ಕಾಲದಲ್ಲಿ ನಡೆಸಿರುವ ಸಮೀಕ್ಷೆಗಳ ಪ್ರಕಾರ ಶಬ್ದ ಮಾಲಿನ್ಯ ಅತಿರೇಕವಾಗಿದ್ದು, ಸಾರ್ವಜನಿಕರು ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪಟಾಕಿಗಳನ್ನು ಸಿಡಿಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದಲ್ಲಿ ಜೀವ ಹಾನಿಯ ಸಾಧ್ಯತೆಗಳು ಅಧಿಕ.  ಸಾರ್ವಜನಿಕರು ಪಟಾಕಿಗಳನ್ನು ಸೀಮಿತವಾಗಿ ಬಳಸುವುದರಲ್ಲಿ ಸರ್ವರ ಹಿತ ಅಡಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿವಮೊಗ್ಗದ ಪರಿಸರ ಅಧಿಕಾರಿ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಆಸ್ಪತ್ರೆಗಳ ಸುತ್ತಲೂ ಪಟಾಕಿ ಸಿಡಿಸಬಾರದು. ೪ ಮೀಟರ್ ಅಂತರದಲ್ಲಿ ೧೨೫ ಡೆಸಿಬಲ್ ಮಟ್ಟಕ್ಕಿಂತ ಹೆಚ್ಚು ಶಬ್ದ  ವನ್ನುಂಟುಮಾಡುವ ಪಟಾಕಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ. ೧೨೫ ಡೆಸಿಬಲ್ ಮಟ್ಟಕ್ಕಿಂತ ಹೆಚ್ಚು ಶಬ್ದವನ್ನುಂಟು ಮಾಡುವ ಲಕ್ಷ್ಮಿ ಪಟಾಕಿ, ಗರ್ನಲ್ (ಆಟಂಬಾಂಬ್) ಮುಂತಾದ ಪಟಾಕಿಗಳನ್ನು ಸಿಡಿಸದಿರಲು ಮನವಿ ಮಾಡಿದ್ದಾರೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ರ ವರೆಗೆ ಪಟಾಕಿಗಳ ಸಿಡಿಸುವಿಕೆಯನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ