ಮುಖಪುಟ /ಸುದ್ದಿ ಸಮಾಚಾರ   
 

ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ

ಮಡಿಕೇರಿ, ಅ. ೩೦  : ಗುರುದೇವ ನೃತ್ಯಕಲಾ ಅಕಾಡೆಮಿ ವತಿಯಿಂದ ನವೆಂಬರ್ ೧೩ ರಂದು  ಗುರುನಾನಕ್ ಜಯಂತಿ ಹಾಗೂ ನ. ೧೪ ರಂದು  ಮಕ್ಕಳ ದಿನಾಚರಣೆ ದಿನಗಳಂದು ಗುರುಪಾದಾರ್ಪಣಂ, ಸಂಗೀತ ನೃತ್ಯೋತ್ಸವ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಾಟ್ಯಾರ್ಪಣಂ ರಾಜ್ಯಮಟ್ಟದ ಭರತನಾಟ್ಯ ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದೆ. ಪ್ರತಿ ವಿಭಾಗಗಳಲ್ಲಿ ೩ ಬಹುಮಾನಗಳಿದ್ದು, ಭಾಗವಹಿಸಿದ ಸ್ಪರ್ಧಿಗಳಿಗೆ ಅರ್ಹತಾಪತ್ರ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳಿಗೆ ನಾಟ್ಯಮಂದಾರ, ನಾಟ್ಯವರ್ಷಿಣಿ ಹಾಗೂ ನಾಟ್ಯಸಮ್ಮೋಹಿನಿ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಅರ್ಜಿಗಳನ್ನು ಕಳುಹಿಸಲು ಕೊನೆಯ ದಿನಾಂಕ: ೦೭-೧೧-೦೮.

ಆಸಕ್ತರು ಗುರುದೇವ ಅಕಾಡೆಮಿಯ ನಿರ್ದೇಶಕರಾದ ಪಿ.ಎಂ.ರಾಧಾಕೃಷ್ಣ, ಮೊ.ಸಂಖ್ಯೆ: ೯೪೪೮೩೮೩೭೮೫, ೯೪೪೯೭೮೪೭೧೭ ಅಥವಾ ೦೮೨೩೨-೨೩೦೭೮೫ ರಲ್ಲಿ ಸಂಪರ್ಕಿಸಬಹುದು ಮತ್ತು ಇ-ಮೇಲ್ gurudevacademy@gmail.com ಸಂಪರ್ಕಿಸಹುದು ಎಂದು ಗುರುದೇವ ಲಲಿತಕಲಾ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ