ಮುಖಪುಟ /ಸುದ್ದಿ ಸಮಾಚಾರ   
 

ಭೂ ಹಗರಣ ಶ್ವೇತಪತ್ರಕ್ಕೆ ಆಗ್ರಹ

ಬೆಂಗಳೂರು, ನ.18: ಗಣಿ ಹಾಗೂ ಭೂ ಹಗರಣದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಮಂಡ್ಯದಲ್ಲಿ ಇಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ  ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸರ್ಕಾರ ಹೊಸ ಮಸೂದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಪಡಿಸಿದರು.

ದೇಶಭಕ್ತಿ ಬಗ್ಗೆ ಮಾತನಾಡುವ ಸಂಘ ಪರಿವಾರ (ಆರ್.ಎಸ್.ಎಸ್) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಭೂಹಗರಣದಲ್ಲಿ ಸಿಲುಕಿರುವ ರಾಜಕಾರಣಿಗಳಿಗೆ ರಾಜಕೀಯ ನಿವೃತ್ತಿ ಕೊಡಿಸಬೇಕು ಎಂದು ಹೇಳಿದರು.

ಈ ಎಲ್ಲ ವಿಷಯಗಳ ಬಗ್ಗೆ ೨೭ ರಂದು ಮೈಸೂರಿನಲ್ಲಿ ರೈತರ ಸಭೆ ಕರೆಯಲಾಗಿದೆ ಎಂದು ಪುಟ್ಟಣ್ಣಯ್ಯ ತಿಳಿಸಿದರು.

            

 

 ಮುಖಪುಟ /ಸುದ್ದಿ ಸಮಾಚಾರ