ಮುಖಪುಟ /ಸುದ್ದಿ ಸಮಾಚಾರ   
 

ಸ್ವಾರ್ಥದಿಂದ ಮಾನವತೆಯ ಮುಳುಗಡೆ
(ತಿರುಚ್ಚಿ ಬಿ.ಎಚ್.ಇ.ಎಲ್. ಕನ್ನಡ ಸಮಿತಿಯಲ್ಲಿ ರಾಜ್ಯೋತ್ಸವ ಸಂಭ್ರಮ)

trichi BHEL Kannada Samitiತಿರುಚ್ಚಿ, ನ.22 :ಸ್ವಾರ್ಥ ಹಾಗೂ ಧನದಾಹದಿಂದ ಇಂದು ಮಾನವತೆಯೇ ಮುಳುಗಡೆಯಾಗುತ್ತಿದೆ. ಕೇವಲ ಹಣ ಗಳಿಕೆಯನ್ನೇ ಪ್ರಧಾನವಾಗಿಸಿಕೊಳ್ಳದೆ, ತಮಗೆ ಶಿಕ್ಷಣ, ಸಂಸ್ಕೃತಿ ಕಲಿಸಿದ ಯಾತ್ನಾಡಿನ ಋಣ ತೀರಿಸಲು ಪ್ರತಿಯೊಬ್ಬ ಕನ್ನಡಿಗರೂ ಮುಂದಾಗಬೇಕು ಎಂದು ಕನ್ನಡರತ್ನ.ಕಾಂ ಸಂಪಾದಕ ಟಿ.ಎಂ. ಸತೀಶ್ ಹೇಳಿದ್ದಾರೆ.

ತಮಿಳುನಾಡಿನ ತಿರುಚ್ಚಿಯ ಕೈಲಾಸಪುರಂನಲ್ಲಿರುವ ಬಿ.ಎಚ್.ಇ.ಎಲ್. ಕನ್ನಡ ಸಮಿತಿ ನ.೨೧ರ ಭಾನುವಾರ ತಿರುಚ್ಚಿಯ ಸಿ.ಸಿ. ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೫೫ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಯಾವುದೇ ಭಾಷೆಗೂ ಕಡಿಮೆ ಏನಿಲ್ಲ. ೭ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿರುವ Trichi Kannada samiti Kannadarajyotsava, T.M.Satishಕನ್ನಡ, ವಿಜ್ಞಾನ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲೂ ಸಮರ್ಥವಾದ ಭಾಷೆಯಾಗಿದೆ. ಇದನ್ನು ಇಂದಿನ ಯುಗಮಾನದ ಅಗತ್ಯಕ್ಕೆ ತಕ್ಕಂತೆ ಬೆಳೆಸುವ ಅಗತ್ಯ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಹೇಳಿದರು.

ವ್ಯಾಸ ಭಾರತದಲ್ಲೂ ಉಲ್ಲೇಖವಿರುವ ಕರ್ನಾಟಕದ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಹಿರಿಮೆಯನ್ನು, ಪಂಪ, ಕುವೆಂಪು, ಸರ್.ಎಂ.ವಿ. ಅವರ ಭಾಷಾಭಿಮಾನ, ರಾಜ್ಯಾಭಿಮಾನವನ್ನು ವಿವರಿಸಿದ ಅವರು, ಉದ್ಯೋಗ ಅರಸಿ ಹೊರನಾಡಿಗೆ ಬಂದು ನೆಲೆಸುವ ಹಲವರಲ್ಲಿ ಕನ್ನಡದ ತುಡಿತ ಇರುತ್ತದೆ. ಕನ್ನಡಕ್ಕಾಗಿ ಹೃದಯ ಮಿಡಿಯುತ್ತದೆ. ಮತ್ತೆ ಕೆಲವರಲ್ಲಿ ಪ್ರತಿಭಾಪಲಾಯನದ ಮೂಲಕ ತಾಯ್ನಾಡಿಗೆ ತಾವು ದ್ರೋಹ ಮಾಡಿದವೇನೋ ಎಂಬ ತಪ್ಪಿತಸ್ಥ ಭಾವನೆ ಕಾಡುತ್ತದೆ. ಇದು ಹೊರನಾಡಿನಲ್ಲೂ ಅವರಲ್ಲಾ ಸದಾ ಕನ್ನಡದ ಚಿಂತನೆಗೆ, ಕನ್ನಡದ ಕೈಂಕರ್ಯಕ್ಕೆ ನಾಂದಿ ಹಾಡುತ್ತದೆ ಎಂದು ಅಭಿಪ್ರಾಯಪಟ್ಟರು.

Kannadarajyotsava, Trichi, BHEL, Kannada Samiti, Shivakumarಕನ್ನಡ ಸಮಿತಿಯ ಅಧ್ಯಕ್ಷ ಹಾಗೂ ಬಿಎಚ್‌ಇಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶಿವಕುಮಾರ್ ಮಾತನಾಡಿ, ತಿರುಚ್ಚಿಯ ಬಿಎಚ್.ಇ.ಎಲ್.ನಲ್ಲಿ ೧೭೩ಕ್ಕೂ ಹೆಚ್ಚು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ೬೦ರ ದಶಕದಿಂದಲೂ ಇಲ್ಲಿ ಕನ್ನಡ ಚಟುವಟಿಕೆ ನಡೆಯುತ್ತಿದೆ. ಈಗ ಹಿಂದಿನ ಕನ್ನಡ ಸಂಘಕ್ಕೆ ಕನ್ನಡ ಸಮಿತಿ ಎಂದು ಮರು ನಾಮಕರಣ ಮಾಡಲಾಗಿದ್ದು, ಯುವ ಕನ್ನಡಿಗರ ಸಂಘಟನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಬಿ.ಎಚ್.ಇ.ಎಲ್.ನ ಮಾನವ ಸಂಪನ್ಮೂಲ ವಿಭಾಗದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಎಂ. ಪಳನಿವೇಲು ಮಾತನಾಡಿ, ತಮ್ಮ ಸಂಸ್ಥೆಯಲ್ಲಿ ಹೊರ ರಾಜ್ಯಗಳಿಂದ ಬಂದು ನೆಲೆಸುವವರಿಗೆ ಅವರ ಸಂಸ್ಕೃತಿಯೊಂದಿಗೆ ಕಲೆಯಲು ಅವಕಾಶ ನೀಡಲಾಗಿದೆ. ತಮಿಳು, ಮಲಯಾಳಂ, ತೆಲುಗು ಹಾಗೂ ಒರಿಸ್ಸಾ ಸಂಘಗಳು ಇಲ್ಲಿದ್ದು, ಇಂಥ ಕಾರ್ಯಕ್ರಮಗಳಿಂದ ಇತರರಿಗೆ ಬೇರೆ Trichi functionರಾಜ್ಯದ ಕಲೆ, ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಹೇಳಿದರು. 

ಕನ್ನಡ ಸಮಿತಿಯ ಸದಸ್ಯರಾದ ಸ್ವಾಮಿ ಕಾರ್ಯಕ್ರಮ ನಿರೂಪಿಸಿ, ಪರಿಚಯ ಭಾಷಣ ಮಾಡಿದರು, ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

ಕನ್ನಡ ಸಮಿತಿಯ ಸದಸ್ಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆಯಿತು. ನೃತ್ಯ, ನಾಟಕ, ಭಾವಗೀತೆ ಹಾಗೂ ಚಲನಚಿತ್ರ ಗೀತೆಗಳ ಗಾಯನ ಮನಸೂರೆಗೊಂಡಿತು.

  ಮುಖಪುಟ /ಸುದ್ದಿ ಸಮಾಚಾರ