ಮುಖಪುಟ /ಸುದ್ದಿ ಸಮಾಚಾರ   
 

ಬಿಜೆಪಿ ವರಿಷ್ಠರೂ ಭ್ರಷ್ಟಾಚಾರದಲ್ಲಿ ಶಾಮೀಲು - ಸಿದ್ದರಾಮಯ್ಯ

siddaramaiahಮೈಸೂರು, ನ.೨೪ - ಯಡಿಯೂರಪ್ಪ ಅವರ ಸ್ವಜನ ಪಕ್ಷಪಾತ ಮತ್ತು ಭೂ ಅವ್ಯವಹಾರಗಳ ಕುರಿತ ಆರೋಪಗಳು ದಾಖಲೆ ಸಹಿತ ಸಾಬೀತಾಗಿದ್ದರೂ ಅವರನ್ನೇ ನಾಯಕರಾಗಿ ಮುಂದುವರಿಸುತ್ತೇವೆ ಎಂಬ ಬಿಜೆಪಿ ವರಿಷ್ಠರ ನಿಲುವು ನೋಡಿದರೆ, ಭ್ರಷ್ಟಾಚಾರದಲ್ಲಿ ಅವರೂ ಶಾಮೀಲಾಗಿದ್ದಾರೆ ಎಂಬ ಅನುಮಾನ ಬರುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಿರುವುದನ್ನು ನೋಡಿದರೆ, ಬಿಜೆಪಿ ವರಿಷ್ಠ ಮಂಡಳಿ ಸಂಪೂರ್ಣ ದುರ್ಬಲವಾಗಿದೆ ಎಂಬುದೂ ಸ್ಥಿರಪಟ್ಟಿದೆ ಎಂದರು.

ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಭ್ರಷ್ಟ ಸರ್ಕಾರವನ್ನು ಪದಚ್ಯುತಗೊಳಿಸಬೇಕು. ರಾಜ್ಯದಲ್ಲಿ ೩೫೬ನೇ ವಿಧಿಯನ್ವಯ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಕೋರಿದರು.

 ಮುಖಪುಟ /ಸುದ್ದಿ ಸಮಾಚಾರ