ಮುಖಪುಟ /ಸುದ್ದಿ ಸಮಾಚಾರ   
 

ಎಸ್‌ಇಜೆಡ್‌ಗೆ ೧೮೦೦ ಎಕರೆ ಭೂಮಿ: ಡಾ. ವಿ.ಎಸ್. ಆಚಾರ್ಯ

Dr. V.S.Acharyaಬೆಂಗಳೂರು, ನ.೨೮: ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಈಗಾಗಲೇ ೧೮೦೦ ಎಕರೆ ಜಾಗವನ್ನು ನೀಡಲಾಗಿದೆ. ಇನ್ನೂ ೭೦೦ ಎಕರೆ ಜಾಗವನ್ನು ನೀಡಬೇಕಾಗಿದೆ ಎಂದು  ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್. ಆಚಾರ್ಯ ಹೇಳಿದ್ದಾರೆ.

ಉಡುಪಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶೇಷ ಆರ್ಥಿಕ ವಲಯ  ಭಾರತದಲ್ಲಿ ಸಾಮಾಜಿಕ ಸಂಸ್ಕೃತಿ ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಇರುವುದು ಸಹಜ. ಅದನ್ನು ಸಮರ್ಥವಾಗಿ ಎದುರಿಸಿ, ಆರ್ಥಿಕ ಪ್ರಗತಿ  ಉತ್ತಮವಾಗಿರಿಸಲು  ಮುಂದಾಗಬೇಕು. 

ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೃಷಿ ವಲಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಆದರೆ  ಈ ಉದ್ಯಮ ಲಾಭದಾಯಕವಾಗಿಲ್ಲ ಎಂದು  ವಿಷಾದವ್ಯಕ್ತಪಡಿಸಿದರು.

 

 ಮುಖಪುಟ /ಸುದ್ದಿ ಸಮಾಚಾರ