ಮುಖಪುಟ /ಸುದ್ದಿ ಸಮಾಚಾರ   
 

2020ಕ್ಕೆ 2.5ಲಕ್ಷ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಗುರಿ

ಬೆಂಗಳೂರು, ನ.18: ರಾಷ್ಟ್ರದಲ್ಲಿ 1 ಲಕ್ಷ 65 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ೨೦೨೦ರ ವೇಳೆಗೆ 2 ಲಕ್ಷ 5೦ ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸುವ ಗುರಿ ಸಾಧಿಸಲು ವಿದ್ಯುತ್ ಉತ್ಪಾದನಾ ಘಟಕಗಳ ತಾಂತ್ರಿಕತೆ ಸುಧಾರಿಸಬೇಕಾಗಿದೆ ಎಂದು ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಹೆಚ್ಚುವರಿ ಮಹಾ ನಿರ್ದೇಶಕ ಡಾ| ಸೀತಾರಾಮು ಹೇಳಿದ್ದಾರೆ.

ನಗರದಲ್ಲಿಂದು ವಿದ್ಯುತ್ ಘಟಕಗಳ ತಾಂತ್ರಿಕ ಸುಧಾರಣೆ  ಕುರಿತಂತೆ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿಶಾಖೋತ್ಪನ್ನ ಸ್ಥಾವರಗಳಲ್ಲಿ ಬಳಸಲಾಗುವ ಬಾಯ್ಲರ್, ಟರ್ಬೈನ್ ನಿಯಂತ್ರಣ ವ್ಯವಸ್ಥೆಗಳು ಹಾಗೂ ಸ್ಥಾವರದ ರಚನೆಯಲ್ಲಿ ಸುಧಾರಣೆ ಸಾಧಿಸಿದರೆ ಮಾತ್ರ ರಾಷ್ಟ್ರೀಯ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

10 ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲು 20ಕೆ.ಜಿ. ಇದ್ದಿಲು ಬೇಕಾಗುತ್ತದೆ. ಇದನ್ನು 6 ಕೆ.ಜಿ.ಗೆ ಇಳಿಸಲು ತಾಂತ್ರಿಕತೆಯನ್ನು ರೂಢಿಸುವ ಅಗತ್ಯವಿದೆ ಎಂದರು.

ವೃತ್ತಿಪರ ನಿಲುವು ಹಾಗೂ ಸಾಮರ್ಥ್ಯವೃದ್ಧಿಯ ವರ್ಗಾವಣೆಯೊಂದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

120 ವಿವಿಧ ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ