ಮುಖಪುಟ /ಸುದ್ದಿ ಸಮಾಚಾರ   
 

2012ಕ್ಕೆ ಮಂಗಳೂರು ತೈಲ ಉತ್ಪಾದನಾ ಘಟಕ ಕಾರ್ಯಾರಂಭ

ಬೆಂಗಳೂರು, ನ.18: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ನೈಸರ್ಗಿಕ ಅನಿಲ ಕಂಪನಿ 35 ಸಾವಿರ ಕೋಟಿ ರೂಪಾಯಿಯ ವಿಶೇಷ ಯೋಜನೆಯನ್ನು ರೂಪಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಓಎನ್‌ಜಿಸಿಯ ಅಧ್ಯಕ್ಷ ಆರ್.ಎಸ್. ಶರ್ಮಾ ಬೆಂಗಳೂರಿನಲ್ಲಿ ಇಂದು ತಿಳಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಎಲ್ಲ ಸಮಸ್ಯೆಗಳು ಪರಿಹಾರವಾಗಿದ್ದು, 2 ಸಾವಿರದ 3೦೦ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಇನ್ನೂ ಬೇಕಾಗಿರುವ 8೦೦ ಎಕರೆ ಜಮೀನನ್ನು ಶೀಘ್ರದಲ್ಲಿಯೇ ಖರೀದಿಸಲಾಗುವುದು ಎಂದರು.

ಮಾರ್ಚ್ 2012ರ ವೇಳೆಗೆ ಮಂಗಳೂರು ತೈಲ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು.

ವೃತ್ತಿಪರ ನಿಲುವು ಹಾಗೂ ಸಾಮರ್ಥ್ಯವೃದ್ಧಿಯ ವರ್ಗಾವಣೆಯೊಂದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

120 ವಿವಿಧ ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ