ಮುಖಪುಟ /ಸುದ್ದಿ ಸಮಾಚಾರ   
 

ಕವಿಗಳಿಗೊಂದು ಸ್ಪೂರ್ತಿ ತಾಣ- ಕಲಾಗ್ರಾಮ

govinda karajolಬೆಂಗಳೂರು, ನ.೨೯: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಬಳಿ ೧೧ ಎಕರೆ ಪ್ರದೇಶದಲ್ಲಿ ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಾಗ್ರಾಮದ ಮೊದಲ ಹಂತದ ಕಾಮಗಾರಿ ಬಹುತೇಕ ಸಂಪೂರ್ಣವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕಲಾಗ್ರಾಮದ ವಿನ್ಯಾಸವೇ ಕಲಾತ್ಮಕವಾಗಿದ್ದು, ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳ ವಾಸ್ತು ವೈಭವವನ್ನು ಬಿಂಬಿಸುತ್ತಿದೆ. ಇದರಲ್ಲಿ ನಾಲ್ಕು ಕುಟೀರಗಳಿದ್ದು, ಇಲ್ಲಿ ಕವಿ, ಸಾಹಿತಿಗಳು ಬಂದು ಒಂದು ತಿಂಗಳು ತಂಗಲು ಅವಕಾಶವಿದೆ.

ಈ ನಾಲ್ಕು ಕುಟೀರಗಳನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಿಂದ ನಿರ್ಮಲ ಪರಿಸರದಲ್ಲಿ ಅರಿಗೆ ಸಾಹಿತ್ಯ ಕೃಷಿ ಮಾಡಲು ಅನುವಾಗುತ್ತದೆ. ಇದು ಕವಿಗಳಿಗೆ ಸ್ಫೂರ್ತಿಯ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇಲ್ಲಿ ಮೇಕಪ್ ಕೊಠಡಿ, ಪಾಕಶಾಲೆ, ಭೋಜನಶಾಲೆ, ಚಿಕ್ಕ ಸಭಾಂಗಣ, ಚಿತ್ರಗಾರ, ಸ್ವಾಗತ ಕೊಠಡಿ, ವಿವಿಧ ಕಲಾತ್ಮಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನೂ ನಿರ್ಮಿಸಲಾಗುತ್ತಿದೆ ಎಂದೂ ಅವರು ವಿವರ ನೀಡಿದರು.

 ಮುಖಪುಟ /ಸುದ್ದಿ ಸಮಾಚಾರ