ಮುಖಪುಟ /ಸುದ್ದಿ ಸಮಾಚಾರ   
 

ಕರ್ನಾಟಕದಲ್ಲಿ ೧೭೮ ಹೋಟೆಲ್‌ಗಳ ನಿರ್ಮಾಣ

ಬೆಂಗಳೂರು, ನ.೨೮: ದಕ್ಷಿಣ ಭಾರತದಲ್ಲಿ  ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಇನ್ನೆರಡು ವರ್ಷಗಳಲ್ಲಿ ೧೩ ಸಾವಿರ ಕೊಠಡಿಗಳು ಇಲ್ಲಿ ನಿರ್ಮಾಣವಾಗುತ್ತಿವೆ ಎಂದು ದಕ್ಷಿಣ ಭಾರತದ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಸ್ಥೆ  ಅಧ್ಯಕ್ಷ ವಿವೇಕ್ ನಾಯರ್ ತಿಳಿಸಿದ್ದಾರೆ.

ಈಗಾಗಲೇ ದಕ್ಷಿಣ ಭಾರತದಲ್ಲಿ  ೭೧೨ ಹೋಟೆಲ್‌ಗಳ ನಿರ್ಮಾಣಕ್ಕೆ  ಅನುಮತಿ ದೊರೆತಿದೆ. ೪೧ ಸಾವಿರ ಕೊಠಡಿಗಳುಳ್ಳ  ಪಂಚತಾರಾ ಹೊಟೇಲ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ೧೭೮, ತಮಿಳು ನಾಡಿನಲ್ಲಿ ೧೧೨, ಕೇರಳದಲ್ಲಿ ೨೦೦, ಆಂಧ್ರದಲ್ಲಿ ೧೧೦, ಪಾಂಡೀಚೆರಿಯಲ್ಲಿ ೧೦ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ೫ ವರ್ಷಗಳಲ್ಲಿ  ೧ ಲಕ್ಷ ಕೋಟಿ ರೂಪಾಯಿ ಬಂಡವಾಳ ಈ ಉದ್ಯಮದಲ್ಲಿ ಹರಿದು ಬರಲಿದೆ ಎಂದರು.

.

 

 ಮುಖಪುಟ /ಸುದ್ದಿ ಸಮಾಚಾರ