ಮುಖಪುಟ /ಸುದ್ದಿ ಸಮಾಚಾರ   
 

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಐ ಒ ಸಿ ಒಪ್ಪಂದ

ಬೆಂಗಳೂರು, ನ.18: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮವು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆಗೆ ಸಂಬಂಧಿಸಿದಂತೆ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಇತ್ತೀಚೆಗೆ ಮುಂಬೈನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ಗಣೇಶನ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಎಸ್. ಕೆ. ಗುಪ್ತಾ ಅವರು  ಮುಂಬೈನಲ್ಲಿ ಇತ್ತೀಚೆಗೆ ವಿತರಣಾ ಒಪ್ಪಂದಕ್ಕೆ ಸಹಿ ಮಾಡಿದರು.

ಈ ಒಪ್ಪಂದದ ಮೂಲಕ ವಿವಿಧ ಉದ್ದಿಮೆಗಳಿಗೆ ಅಗತ್ಯವಿರುವ ಪೆಟ್ರೋಲಿಯಂ ಉತ್ಪನ್ನಗಳಾದ ಪ್ಯಾರಾಫಿನ್ ವ್ಯಾಕ್ಸ್, ಮಿನರಲ್ ಟರ್ಪನ್‌ಟೈನ್ ಆಯಿಲ್, ಬೆನ್‌ಜಿನ್ ಮತ್ತು ಟಾಲ್ವಿನ್ ವಿತರಣಾ ಕ್ಷೇತ್ರಕ್ಕೆ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮವು ಕಾಲಿಟ್ಟಿದೆ.  ಸಣ್ಣ ಕೈಗಾರಿಕೆ ಘಟಕಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಿದ್ದು, ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆದಾರರು ಈ ಉತ್ಪನ್ನಗಳ ಪೂರೈಕೆಗಾಗಿ  ಹಾಗೂ  ಹೆಚ್ಚಿನ ಮಾಹಿತಿಗಾಗಿ ನಿಗಮದ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ಗಣೇಶನ್ ಅವರು ಕೋರಿದ್ದಾರೆ. 

 ಮುಖಪುಟ /ಸುದ್ದಿ ಸಮಾಚಾರ