ಮುಖಪುಟ /ಸುದ್ದಿ ಸಮಾಚಾರ   
 

ಚಿತ್ರನಟ ಶ್ರೀನಾಥ್ ಗೆ ಅಭಿನಂದನೆ

srinath kannada film actorಬೆಂಗಳೂರು ನವೆಂಬರ್ 25: ಕರ್ನಾಟಕ ವಿಧಾನ ಮಂಡಲದ ಗ್ರಂಥಾಲಯ ಸಮಿತಿ ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಸಮಿತಿಯ ಸದಸ್ಯರುಗಳು            ಚಿತ್ರನಟ ಶ್ರೀನಾಥ್ ಅವರಿಗೆ ಶ್ರೀಲಂಕಾ ದೇಶದ ದಿ ಓಪನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸನ್, ಕೊಲಂಬೋ ಇವರು ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರಧಾನ ಮಾಡಿರುವುದಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ವೀರಣ್ಣಮತ್ತಿಕಟ್ಟಿ ಅವರು ಅತೀವ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

 ಶ್ರೀನಾಥ್ ಅವರ ಸಜ್ಜನಿಕೆ ಅವರು ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಮಾದರಿಯಾಗುವಂಥದು.  ಅವರು ನಿಜ ಜೀವನದಲ್ಲಿ ಹೇಗೋ ಹಾಗೆಯೇ ಚಿತ್ರರಂಗದಲ್ಲಿಯೂ ಸ್ನೇಹಮಯಿ, ಅಜಾತಶತೃವೆಂದು  ಬಣ್ಣಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ                   ಡಾ: ಚಂದ್ರಶೇಖರ ಕಂಬಾರ, ಶ್ರೀ ಎಂ. ನಾರಾಯಣಸ್ವಾಮಿ, ಶ್ರೀ ಕೆ. ಲಕ್ಷ್ಮೀನಾರಾಯಣ, ಶ್ರೀ ಎಸ್.ವಿ. ರಾಮಚಂದ್ರ, ಶ್ರೀ ಎನ್.ಎ. ಹ್ಯಾರಿಸ್ ಶ್ರೀ ಹೆಚ್.ಎಸ್. ಪ್ರಕಾಶ್, ಮುಖ್ಯಮಂತ್ರಿ ಚಂದ್ರು, ವಿ. ಶ್ರೀಶ್  ಅವರುಗಳು ಹಾಜರಿದ್ದರು. 

ಮುಖಪುಟ /ಸುದ್ದಿ ಸಮಾಚಾರ