ಮುಖಪುಟ /ಸುದ್ದಿ ಸಮಾಚಾರ   
 

ವಿದ್ಯುತ್ ಅಭಾವ ನೀಗಿಸಲು ಸರ್ಕಾರದ ಕ್ರಮ
ಸಕ್ಕರೆ ಕಾರ್ಖಾನೆಗಳಿಂದ 220 ಮೆ.ವ್ಯಾ. ವಿದ್ಯುತ್ ಖರೀದಿಸಲು ನಿರ್ಧಾರ

ಬೆಂಗಳೂರು, ನ.28 :ರಾಜ್ಯದಲ್ಲಿನ ವಿದ್ಯುತ್  ಅಭಾವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ರಾಜ್ಯದಲ್ಲಿ ಒಟ್ಟು ೩೦೦ ಮೆ.ವ್ಯಾ. ವಿದ್ಯುತ್ ಉತ್ಪಾದಿಸುತ್ತಿದ್ದು ಅದರಲ್ಲಿ ಈವರೆಗೆ ೮೦ ಮೆ.ವ್ಯಾ. ಮಾತ್ರ ಸರ್ಕಾರಕ್ಕೆ ಮಾರಾಟ ಮಾಡ ಲಾಗುತ್ತಿತ್ತು. ಈಗ ಸರ್ಕಾರವು ಯೂನಿಟ್ ಗೆ ರೂ.೭.೨೫ ದರದಲ್ಲಿ ಇನ್ನೂ ೨೨೦ ಮೆ.ವ್ಯಾ ಖರೀದಿಸಲು ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದೆ. ಕೇಂದ್ರದಿಂದ ಸರಾಸರಿ ತಿಂಗಳಿಗೆ ೧೫೯೯ ಮೆ.ವ್ಯಾ. ವಿದ್ಯುತ್ ಸರಬರಾಜಾಗಬೇಕಾಗಿದ್ದು ಅದು ಕೇವಲ ೧೨೦೦ಮೆ.ವ್ಯಾ. ಮಾತ್ರ ಇದೆಯೆಂದು ಗಮನಿಸಿದೆ.

ಕೆ.ಎಸ್.ಆರ್.ಟಿ.ಸಿಯ ಗಣಕೀಕರಣ ಸೇವೆಯ ನ್ನು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಮತ್ತು ಇಲಾಖೆಯ ಕಾರ್ಯಕ್ಷಮತೆಯನ್ನು  ಉತ್ತಮಗೊಳಿಸಲು, ವೆಬ್ ಸೈಟ್ ಮೂಲಕ ಮಾಹಿತಿ ನೀಡಿಕೆ, ಅಪಘಾತಗಳು ಸಂಭವಿಸಿದ ಸಂದಭದಲ್ಲಿ ರಕ್ತದ ಗುಂಪುಗಳ ಪತ್ತೆ ಮೊದಲಾದ ಸೇವೆ ಒದಗಿಸಲು ಅನುವಾಗಲು ಒಪ್ಪಿಗೆ ಸೂಚಿಸಿದೆ.

ದೇವರಾಜಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ೨೦ ಕೋಟಿ ರೂಗಳ ಸಾಲ ಪಡೆಯುವ ಸಂಬಂಧ ಸಕಾರದ ಖಾತ್ರಿಯನ್ನು ನೀಡಲಾಗುವುದು.

ಮಾದರಿ ರಾಷ್ಟ್ರೀಯ ನ್ಯಾಯಿಕಸೇವಾ ಆಯೋಗವು ಉನ್ನತ ಶಿಕ್ಷಣ ಹೊಂದಿರುವ ನ್ಯಾಯಾಧೀಶರಿಗೆ  ೧೯೯೯ ರಿಂದ ೩ ಮುಂಗಡ ವೇತನ ನೀಡಲು ತೀರ್ಮಾನಿಸಿದ್ದು ೩೩ ಅಧಿಕಾರಿಗಳು ಈ ಸೌಲಭ್ಯ ಪಡೆಯುತ್ತಿದ್ದು ೪೫ ಲಕ್ಷ ರೂ ವೆಚ್ಚವಾಗಲಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ದೊಡ್ಡ ಸಾಗ್ಗೆರೆಯಲ್ಲಿ ೧೦೭೫.೨೫ ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ಮಾದರಿಯಲ್ಲಿ ಸಸ್ಯಕ್ಷೇತ್ರ ಬೆಳಸಲಿದ್ದು, ಇಲ್ಲಿ ೨೦೦೦ ಸಸ್ಯಪ್ರಭೇದಗಳನ್ನು ಬೆಳವಣಿಗೆ ಮಾಡುವ ತೀರ್ಮಾನವಾಗಿದೆ.

೨೦೦೯ ನೇ ಸಾಲಿಗೆ ಸರ್ಕಾರವು ಒಟ್ಟು ೨೪ ದಿನಗಳ ಸಾರ್ವತ್ರಿಕ ರಜಾ ದಿನಗಳು ಮತ್ತು ೧೪ ಪರಿಮಿತ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ

ಮುಖಪುಟ /ಸುದ್ದಿ ಸಮಾಚಾರ