ಮುಖಪುಟ /ಸುದ್ದಿ ಸಮಾಚಾರ   
 

ಚಾಮುಂಡಿ ಬೆಟ್ಟದ ನಂದಿಗೆ ಮಸ್ತಕಾಭಿಷೇಕ

ಮೈಸೂರು :  ಮೈಸೂರು ಚಾಮುಂಡಿಬೆಟ್ಟದಲ್ಲಿರುವ ಬೃಹತ್ ನಂದಿ ವಿಗ್ರಹಕ್ಕೆ ಕಾರ್ತೀಕ ಮಾಸದ ಮೂರನೇ ಸೋಮವಾರ ಮಹಾ ಮಸ್ತಕಾಭಿಷೇಕ ನಡೆಸಲಾಯಿತು.

ಚಾಮುಂಡಿ ಬೆಟ್ಟದ ನಂದಿ ಪೂಜಾ ಮಹೋತ್ಸವ ಸಮಿತಿಯ ಬೆಟ್ಟದ ಬಳಗ ಆಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಬಯಲಿನಲ್ಲಿ ನಿಂತ ಬೃಹತ್ ಬಸವಣ್ಣನಿಗೆ ಕುಂಕುಮ, ಹರಿಶಿನ, ಗಂಧ, ಕ್ಷೀರ, ಜಲದಿಂದ ಅಭಿಷೇಕ ಮಾಡಲಾಯಿತು.

ಕೃಷ್ಣವರ್ಣದ ನಂದಿ ವಿವಿಧ ವರ್ಣಗಳಿಂದ ಕಂಗೋಳಿಸುವುದನ್ನು ನೋಡಲು ಸಾವಿರಾರು ಪ್ರವಾಸಿಗರು ಹಾಗೂ ಭಕ್ತರು ಬೆಟ್ಟದಲ್ಲಿ ಸೇರಿದ್ದರು.

ಮಹಾರಾಜರ ಕಾಲದಲ್ಲಿ ಬೆಟ್ಟದ ನಂದಿಗೆ ನಡೆಯುತ್ತಿದ್ದ ಅಭಿಷೇಕ ರಾಜರಾಳ್ವಿಕೆಯ ನಂತರ ನಿಂತು ಹೋಗಿತ್ತು. ಕಳೆದ 3 ವರ್ಷಗಳಿಂದ ಬೆಟ್ಟದ ಬಳಗದ ಸದಸ್ಯರು ಕಾರ್ತೀಕ ಮಾಸದ 3ನೇ ಸೋಮವಾರ ಅಭಿಷೇಕ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ