ಮುಖಪುಟ /ಸುದ್ದಿ ಸಮಾಚಾರ   
 

ಹಂಪಿ ಉತ್ಸವಕ್ಕೆ ಅಡ್ವಾಣಿ ಅವರಿಂದ ವಿಧ್ಯುಕ್ತ ಚಾಲನೆ

ಹೊಸಪೇಟೆ, ನ.3: ಮರೆಯಲಾಗದ ಕನ್ನಡ ಸಾಮ್ರಾಜ್ಯ ವಿಜಯನಗರದ ರಾಜಧಾನಿಯಾಗಿ ಮೆರೆದ ಹಂಪಿಯಲ್ಲಿಂದು 3 ದಿನಗಳ ಹಂಪಿ ಉತ್ಸವಕ್ಕೆ ಲೋಕಸಭೆಯ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಚಾಲನೆ ನೀಡಿದರು.

ಮನೋಹರವಾಗಿ ಅಲಂಕಾರಗೊಂಡು, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಕನ್ನಡ ನಾಡಿನ ಸುವರ್ಣ ಯುಗವನ್ನು ನೆನೆಪಿಸುವ ಉತ್ಸವವನ್ನು  ಅವರು ಉದ್ಘಾಟಿಸಿದರು. ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸ ಡಾ.ಬಾಲಮುರಳಿಕೃಷ್ಣ, ಖ್ಯಾತ ಹಿನ್ನೆಲೆ ಗಾಯಕರಾದ ಆಶಾ ಬೋಸ್ಲೆ , ಪಂಕಜ್ ಉದಾಸ್, ಪಿಟೀಲು ವಾದಕ ಸುಬ್ರಹ್ಮಣ್ಯಂ, ಗಾಯಕಿ ಕವಿತಾ ಕೃಷ್ಣಮೂರ್ತಿ ಸೇರಿದಂತೆ ಹಲವು ಕಲಾವಿದರನ್ನು ಲಾಲ್ ಕೃಷ್ಣ ಅಡ್ವಾಣಿ ಸತ್ಕರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್. ಅಶೋಕ್, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮಲು, ಸಂಸದ ಅನಂತಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ದೇಶ ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿ ಆನಂದಿಸಿದರು.

ಮುಖಪುಟ /ಸುದ್ದಿ ಸಮಾಚಾರ