ಮುಖಪುಟ /ಸುದ್ದಿ ಸಮಾಚಾರ   

ನವೆಂಬರ್ ೨೧ ರಿಂದ ಧಾರವಾಡ ಉತ್ಸವ

ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಧಾರವಾಡ ಉತ್ಸವ-೨೦೦೮ ನ್ನು ಇದೇ ನವೆಂಬರ್ ೨೧, ೨೨ ಮತ್ತು ೨೩ ರಂದು ಹುಬ್ಬಳ್ಳಿ ಧಾರವಾಡ ಅವಳಿ ಮಹಾನಗರಗಳ ವ್ಯಾಪ್ತಿಯ ೧೪ ವೇದಿಕೆಗಳಲ್ಲಿ ಸಂಗೀತ ನೃತ್ಯ, ಸಂಗೀತ, ನಾಟಕ, ಜಾನಪದಕಲೆ, ಶಿಲ್ಪಕಲೆ, ತೈಲಚಿತ್ರ, ವಿಚಾರ ಸಂಕಿರಣ, ಕವಿಗೋಷ್ಟಿ,ಚಲನಚಿತ್ರ, ಸಾಕ್ಷ್ಯಚಿತ್ರ, ಹಾಸ್ಯ ಮಕ್ಕಳ ಕಾರ್ಯಕ್ರಮ, ಸೇರಿದಂತೆ ವಿವಿಧ ಕಲಾ ಪ್ರಾಕಾರಗಳ ೩೧೮ ಕಾರ್ಯಕ್ರಮಗಳಿಗೆ ೩೫೧೬ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀದರ್ಪಣ ಜೈನ್ ತಿಳಿಸಿದ್ದಾರೆ.

೪೨೫ ನೃತ್ಯ ಕಲಾವಿದರು, ೧೫೫ ಸಂಗೀತ ಕಲಾವಿದರು, ೪೭೦ ನಾಟಕ ಕಲಾವಿದರು, ೪೫೬ ಜನಪದ ಕಲಾವಿದರು, ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಿರಿಯ ಕವಿ ಡಾ. ಚನ್ನವೀರ ಕಣವಿ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ೧೧ ಉಪ ಸಮಿತಿಗಳನ್ನು ರಚಿಸಿ, ಜವಾಬ್ದಾರಿ ನೀಡಲಾಗಿದೆ. ಮಕ್ಕಳ ಕಾರ್ಯಕ್ರಮಕ್ಕೆ ವಿಶೇಷವಾಗಿ ಒಂದು ಉಪ ಸಮಿತಿ ರಚಿಸಲಾಗಿದೆ ಎಚಿದು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ನಾಡಿನ ಹೆವ್ಮ್ಮೆಯ ಸಂಗೀತ ಸಾಮ್ರಾಟ ಡಾ. ಭೀಮಸೇನ ಜೋಷಿ ಅವರಿಗೆ ಭಾರತರತ್ನ ಗೌರವ ಮತ್ತು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿರುವುದು ಈ ಬಾರಿಯ ಉತ್ಸವಕ್ಕೆ ವಿಶೇಷ ಮೆರುಗು ತಂದಿದೆ. ಇದಕ್ಕೆ ಪೂರಕವಾಗಿ ಮೂರು ದಿನಗಳ ಕಾಲ ಕಾರ್ಯಕ್ರಮಗಳ ವಿವಿಧ ವೇದಿಕೆಗಳು ಮತ್ತು ಮೆರವಣಿಗೆ ವಿಶಿಷ್ಟವಾಗಿರುವಂತೆ ರೂಪಿಸಲಾಗಿದೆ ಎಂದರು.

ಉತ್ಸವದ ಮೆರವಣಿಗೆ, ವಸ್ತುಪ್ರದರ್ಶನ ಮತ್ತು ಕಾರ್ಯಕ್ರಮ ನಡೆಯುವ ವಿವಿಧ ವೇದಿಕೆಗಳಲ್ಲಿ ಪಂ. ಭೀಮಸೇನ ಜೋಷಿಯವರ ಬದುಕು-ಸಾಧನೆ ಮತ್ತು ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ, ಚಲನಚಿತ್ರ ಪ್ರದರ್ಶನ, ವಿಚಾರ ಸಂಕಿರಣ, ಸ್ತಬ್ಧಚಿತ್ರ ಮತ್ತು ಕನ್ನಡ ಸಾಹಿತ್ಯದ ಇತಿಹಾಸ, ವೈಶಿಷ್ಟ್ಯವನ್ನು ಬಿಂಬಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ವಿಶೇಷವಾಗಿ ನ. ೨೨ರಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬೆಳಿಗ್ಗೆ ೯.೩೦ರಿಂದ ೧೧.೩೦ರ ವರೆಗೆ ಪಂ. ಭೀಮಸೇನ ಜೋಷಿಯವರ ಗಾಯನ, ಉಪನ್ಯಾಸ ಮತ್ತು ಚಲನಚಿತ್ರ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಚಿದು ಅವರು ತಿಳಿಸಿದರು.

ಸ್ಥಳೀಯ ಕಲಾವಿದರೂ ಸ್ಭೆರಿದಂತೆ ರಾಷ್ಟ್ರ- ಅಂತರರಾಷ್ಟ್ರೀಯ ಖ್ಯಾತಿಯ ಹೆಸರಾಂತ ಕಲಾವಿದರನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗಿದೆ. ವಿಶಿಷ್ಟ ಕಲಾ ಪ್ರಕಾರ ಸೂಫಿ ಕಲೆಯನ್ನು ಪ್ರಸ್ತುತ ಪಡಿಸುವ ವಡಾಲಿ ಸಹೋದರರು ಮತ್ತು ಹೆಸರಾಂತ ಗಝಲ್ ಗಾಯಕ ಶ್ರೀ ಗುಲಾಂ ಅಲಿ ಅವರನ್ನು ಆಹ್ವಾನಿಸಲು ಆಲೋಚಿಸಲಾಗಿದೆ ಎಚಿದು ಅವರು ತಿಳಿಸಿದರು.

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಧಾರವಾಡ ಯುವ ಉತ್ಸವದಲ್ಲಿ ಭಾಗವಹಿಸಿ, ವಿಶಿಷ್ಟ ಪ್ರತಿಭೆ ಪ್ರದರ್ಶಿಸಿದ ವಿವಿಧ ಕಲೆಗಳ ೨೭೦ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಚಿದು ಜೈನ್ ತಿಳಿಸಿದರು.

ನವೆಂಬರ್ ೨೧ರಂದು ಮಧ್ಯಾಹ್ನ ವಿವಿಧ ಕಲಾ ಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಅಚಿದು ಸಂಜೆ ೬ ಗಂಟೆಗೆ ಸ್ಥಳೀಯ ಕರ್ನಾಟಕ ಕಾಲೇಜಿನ ವಿಶಾಲ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಗುವುದು. ೩ ದಿನಗಳ ಕಾಲ ನಡೆಯುವ ಧಾರವಾಡ ಉತ್ಸವಕ್ಕೆ ೬೫ ಲಕ್ಷ ರೂಪಾಯಿಗಳ ವೆಚ್ಚ ಆಗಬಹ್ಮದೆಂದು ಅಚಿದಾಜು ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೨೦ ಲಕ್ಷ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ರೂ. ೨೫ ಲಕ್ಷ ಅನುದಾನವನನ್ನು ಪಡೆಯಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇನ್ನಷ್ಟು ನೆರವನ್ನು ನಿರೀಕ್ಷಿಸಲಾಗಿದೆ. ಅಲ್ಲದೆ ಸ್ಥಳೀಯ ದಾನಿಗಳಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಜೈನ್ ತಿಳಿಸಿದ್ದಾರೆ.

ಸುದ್ದಿ ಮಾಧ್ಯಮದ ಜೊತೆಗೆ ಧಾರವಾಡ ಉತ್ಸವದ ವ್ಯಾಪಕ ಪ್ರಚಾರಕ್ಕೆ ಉದ್ಘಾಟನಾ ಕಾರ್ಯಕ್ರಮದ ಮುನ್ನಾ ದಿನದಂದು ಧಾರವಾಡ ಹುಬ್ಬಳ್ಳಿಗಳಲ್ಲಿ ಧಾರವಾಡ ಉತ್ಸವ ಓಟ-೨೦೦೮ನ್ನು ಆಯೋಜಿಸಲಾಗಿದೆ ಎಚಿದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಮೋಹನ್ ನಾಗಮ್ಮನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಚನ್ನೂರ ಮತ್ತು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಪಿ.ಎಸ್. ಪರ್ವತಿ ಅವರು ಉಪಸ್ಥಿತರಿದ್ದರು

 

ಮುಖಪುಟ /ಸುದ್ದಿ ಸಮಾಚಾರ