ಮುಖಪುಟ /ಸುದ್ದಿ ಸಮಾಚಾರ   

ಭಾಷೆ ಉಳಿಸುವವರು ಕೆಡಿಸಿವವರು ಮಾಧ್ಯಮದವರೇ ಪ್ರೊ.ಜಿ.ವಿ.

ಬೆಂಗಳೂರು, ನ.19 : ಯಾವುದೇ ಭಾಷೆಯನ್ನು ಉಳಿಸುವವರು ಮತ್ತು ಕೆಡಿಸುವವರು ಮಾಧ್ಯಮದವರೇ ಎಂದು ಭಾಷಾ ಶಾಸ್ತ್ರಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿಂದು ದೂರದರ್ಶನ ಸುದ್ದಿ ವಿಭಾಗದ ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ತಪ್ಪು ಭಾಷಾ ಪ್ರಯೋಗದ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ದೃಶ್ಯ ವಾಹಿನಿಗಳಲ್ಲಿ ಇಂದು ಕನ್ನಡ ಬಳಕೆ ಕಣ್ಣೀರು ತರಿಸುತ್ತಿದೆ. ಕನ್ನಡ ಪದಗಳ ಬಳಕೆಯೇ ಕಡಿಮೆಯಾಗಿ ಇಂಗ್ಲಿಷ್ ಮಿಶ್ರಿತ ಭಾಷೆ ರಾರಾಜಿಸುತ್ತಿದೆ. ಕ್ಯಾಪ್ಸಿಕಾಮ್ ಅನ್ನು ನೈಫ್ ನಿಂದ ಕಟ್ ಮಾಡಿ ಎನ್ನುವುದೇ ಕನ್ನಡವೇ ಎಂದು ಪ್ರಶ್ನಿಸಿದರು.

ಪ್ರಸಕ್ತ ಸನ್ನಿವೇಶದಲ್ಲಿ ಕನ್ನಡ ಉಳಿಸಿದ್ದಿದ್ದರೆ ಅದು ದೂರದರ್ಶನ ವಾರ್ತೆಯಲ್ಲಿ ಮಾತ್ರ, ಕನ್ನಡದ ಉಳಿವಿಗೆ ಸುದ್ದಿ ಮಾಧ್ಯಮದ ಕೊಡುಗೆ ಅನುಪಮ ಎಂದು ಹೇಳಿದರು.

ಭಾಷೆಯ ಉಚ್ಚಾರಣೆ, ಅಲ್ಪ ಪ್ರಾಣ ಮಹಾಪ್ರಾಣಗಳ ಪ್ರಯೋಗಗಳ ಬಗ್ಗೆ ವಾರ್ತಾ ವಾಚಕರರು ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಪ್ರೊ.ಜಿ.ವಿ. ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ