ಮುಖಪುಟ /ಸುದ್ದಿ ಸಮಾಚಾರ   
 

ಸಿಇಟಿ ಸೀಟು ಪಡೆದ ಪ್ರತಿಭಾವಂತರಿಗೆ ಶೇ.6 ಬಡ್ಡಿ ದರದ ಸಾಲ

ಬೆಂಗಳೂರು, ನ.28 :ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಮೂಲಕ ವೃತ್ತಿಶಿಕ್ಷಣ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ೨೦೦೮-೦೯ ನೇ ಸಾಲಿನಲ್ಲಿ ಶೇ ೬ ರ ಬಡ್ಡಿದರ ದಲ್ಲಿ ಶೈಕ್ಷಣಿಕ ಸಾಲವನ್ನು ಜೂನ್ ೧ರಿಂದ ಅನ್ವಯಿಸುವಂತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟದಲ್ಲಿ ಕೈಗೊಂಡ ಇನ್ನಿತರ ತೀರ್ಮಾನಗಳು -

  • ಬಿಪಿಎಲ್ ಕಾರ್ಡುಗಳ ನೀಡಿಕೆಯನ್ನು ಪ್ಲಾಂಟೇಶನ್ ಕಾರ್ಮಿಕರಿಗೂ ವಿಸ್ತರಿಸಲು ತೀರ್ಮಾನಿಸಿದ್ದು ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕರಿಗೆ ನೆರವು ದೊರೆಯಲಿದೆ.

  • ಸಹಕಾರಿ ಸಂಘಗಳ ಮೂಲಕ ಕೃಷಿಕರಿಗೆ, ನೇಕಾರರಿಗೆ, ಮೀನುಗಾರರಿಗೆ ಶೇ. ೩ರ ಬಡ್ಡಿ ದರದಲ್ಲಿ ಸಹಕಾರಿ ಸಾಲ ನೀಡಿಕೆಯನ್ನು  ೧.೪.೨೦೦೮ ರಿಂದ ಅನ್ವಯಿಸುವಂತೆ ನೀಡುತ್ತಿದ್ದು ೩,೧೭,೬೨೪ ರೈತರಿಗೆ ರೂ.೭೩,೬೬೯.೮ ಲಕ್ಷಗಳ ಅಲ್ಪಾವಧಿ ಸಾಲ, ೩೦೯೫ ರೈತರಿಗೆ ೧,೬೪೧ ಲಕ್ಷ ರೂ ಮಧ್ಯಮಾವಧಿ ಸಾಲ ಮತು ೩,೨೧,೨೧೬ ರೈತರುಗಳಿಗೆ ೭೭, ೦೫೫.೮೭ ಲಕ್ಷ ರೂಗಳ ದೀರ್ಘಾವಧಿ ಸಾಲ ನೀಡಲಾಗುತ್ತಿದ್ದು ಇದಕ್ಕಾಗಿ ಸರ್ಕಾರಕ್ಕೆ ರೂ ೭೭೦ ಲಕ್ಷಗಳ ಹೊರೆ ಬೀಳಲಿದೆ.

  • ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ  ಬೆಂಗಳೂರು ಉತ್ತರ ಮತ್ತು ದಕ್ಷ್ಷಿಣ ಭಾಗಗಳಲಿ ಒಟ್ಟು ೪೦೦ಎಕರೆ ಜಮೀನನ್ನು ನೀಡಲು ತೀರ್ಮಾನಿಸಿದೆ.

  • ಲೋಕಶಿಕ್ಷಣ ಟ್ರ್ರಸ್ಟ್‌ಗೆ ಕೆಂಗೇರಿ ಬಳಿಯಿರುವ ಭೀಮನಕುಪ್ಪೆಯಲ್ಲಿ  ೪ ಎಕರೆ ಜಮೀನನ್ನು guidance value ಆಧಾರದಲ್ಲಿ ನೀಡಲು ತೀರ್ಮಾನಿಸಿದೆ. ಹೊಸದಾಗಿ ರೂಪುಗೊಂಡಿರುವ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕುಗಳನ್ನು ತೆರೆಯಲು ತೀರ್ಮಾನಿಸಿದೆ.

  • ತೋಟಗಾರಿಕಾ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ೯೦:೧೦ ಅನುಪಾತದಲ್ಲಿ ಮುಂಭಡ್ತಿ ಮತ್ತು ನೇರ ನೇಮಕಾತಿ ಮಾಡುವುದೂ ಸೇರಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಅನುಮೋದನೆ ನೀಡಿದೆ.

  • ಲೋಕಾಯುಕ್ತದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಯೋಗಿನಾಥ್ ಮತ್ತು ನಾಡಿಗೇರ್ ಜಯಾಸ್ವಾಮಿ ಯವರ ಸೇವೆಯನ್ನು ೧ವರ್ಷ ಅವಧಿಗೆ ಮುಂದುವರೆಸಲಾಗಿದೆ.

ಮುಖಪುಟ /ಸುದ್ದಿ ಸಮಾಚಾರ