ಮುಖಪುಟ /ಸುದ್ದಿ ಸಮಾಚಾರ   
 

ಮುಂಬೈ ಉಗ್ರರ ಅಟ್ಟಹಾಸಕ್ಕೆ ರಾಜ್ಯದ ಖಂಡನೆ

ಬೆಂಗಳೂರು, ನ.28 : ಮುಂಬೈನಲ್ಲಿ ನಡೆದಿರುವ ಉಗ್ರರ ಅಟ್ಟಹಾಸವನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಮುಂಬೈನಲ್ಲಿ  ನಡೆದಿರುವ ಉಗ್ರರ ಧಾಳಿಯನ್ನು ಕಟುವಾಗಿ ಖಂಡಿಸಿತಲ್ಲದೆ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಜಂಟಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟ್ಟೆ,, ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್, ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಶೋಕ ಸೂಚಕವಾಗಿ ಮೌನಾಚರಣೆ ಮಾಡಲಾಯಿತೆಂದು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಕೂಮಾರಿ ಶೋಭಾ ಕರಂದ್ಲಾಜೆ ಯವರು ಪತ್ರಕರ್ತರಿಗೆ ತಿಳಿಸಿದರು.

ಕೇಂದ್ರ ಪೊಲೀಸ್ ಮೀಸಲು ಪಡೆಗೆ  ಬೆಂಗಳೂರು ದಕ್ಷಿಣ ತಾಲ್ಲೂಕಿನ ತರಳು ಗ್ರಾಮದಲ್ಲಿ ೨೨೦ ಎಕರೆ ಜಮೀನನ್ನು ನೀಡಲು ತೀರ್ಮಾನಿಸಲಾಯಿತು.

ಮುಖಪುಟ /ಸುದ್ದಿ ಸಮಾಚಾರ