ಮುಖಪುಟ /ಸುದ್ದಿ ಸಮಾಚಾರ   
 

ಎಂ.ಬಿ. ಸಿಂಗ್ 90 ಪುಸ್ತಕ ಲೋಕಾರ್ಪಣೆ
 

M.B. Singh 90ಬೆಂಗಳೂರು, ಮೇ 24:  ಪ್ರತಿಷ್ಠಿತ ಟಿ.ಎಸ್. ರಾಮಚಂದ್ರರಾವ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಪಾತ್ರವಾಗಿರುವ ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್ ಅವರ 90ನೇ ಜನ್ಮ ದಿನದ ಸಂದರ್ಭದಲ್ಲಿ  ಕನ್ನಡ ಪತ್ರಿಕೋದ್ಯಮದ ಕಟ್ಟಾಳು ಎಂ.ಬಿ.ಸಿಂಗ್ 90 ಅಭಿನಂದನಾ ಪುಸ್ತಕವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್, ನಿಯತಕಾಲಿಕ ಪತ್ರಿಕೋದ್ಯಮಕ್ಕೆ ಆಧುನಿಕತೆಯ ಸ್ವರೂಪ ನೀಡಿದ ಕೀರ್ತಿ ಎಂ.ಬಿ. ಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.

ಮುದ್ರಣ ಮಾಧ್ಯಮದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯ ವಿಚಾರದಲ್ಲೂ ಎಂ.ಬಿ. ಸಿಂಗ್ ಅವರ ಕೊಡುಗೆ ಅನುಪಮವಾದದ್ದು ಎಂದು ಅವರು ಹೇಳಿದರು.

ಉದಯವಾಣಿ ದಿನಪತ್ರಿಕೆಯ ಮಾಜಿ ಸಂಪಾದಕಿ ಡಾ. ಪೂರ್ಣಿಮಾ ಅವರು ಈ ಕೃತಿಯನ್ನು ಸಂಪಾದಿಸಿದ್ದು, ಇಂದು ನಡೆದ ಸಮಾರಂಭದಲ್ಲಿ ಇತಿಹಾಸತಜ್ಞ ಷ. ಶೆಟ್ಟರ್, ಎಚ್.ಎನ್. ಆನಂದ್, ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ