ಮುಖಪುಟ /ಸುದ್ದಿ ಸಮಾಚಾರ 

ಚಿತ್ರ ತಾರೆಯರ ಮತದಾನ

Shivarajkumarಬೆಂಗಳೂರು, ಮೇ ೫: ಕನ್ನಡ ಚಿತ್ರರಂಗದ ಹಲವು ಪ್ರಸಿದ್ಧ ನಟ ನಟಿಯರು ಇಂದು ತಮ್ಮ ತಮ್ಮ ಮನೆ ವ್ಯಾಪ್ತಿಗೆ ಬರುವ ಮತಕ್ಷೇತ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಸಂವಿಧಾನಾತ್ಮಕ ಹಕ್ಕು ಚಲಾಯಿಸಿದರು.

ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್, ಪಾರ್ವತಮ್ಮ ರಾಜಕುಮಾರ್ ಸದಾಶಿವ ನಗರದಲ್ಲಿ ಮತ ಚಲಾಯಿಸಿದರೆ, ನಟ ಉಪೇಂದ್ರ ತಮ್ಮ ಪತ್ನಿ ಚಿತ್ರನಟಿ ಪ್ರಿಯಾಂಕ ಅವರೊಂದಿಗೆ ಕತ್ರಿಗುಪ್ಪೆಯ ಮತಗಟ್ಟೆಯಲ್ಲಿ ಮತ ಹಾಕಿದರು.

ನಾಯಕ ನಟ ಗಣೇಶ್, ನಟ ಶಿವರಾಜ್ ಕುಮಾರ್, ನಟಿ ರಮ್ಯಾ, ದುನಿಯಾ ವಿಜಯ್, ರಮೇಶ್ ಅರವಿಂದ್ ಮೊದಲಾದವರು ಮತ ಚಲಾಯಿಸಿದರು.

ಮುಖಪುಟ /ಸುದ್ದಿ ಸಮಾಚಾರ